ಶಿವಮೊಗ್ಗ ನ್ಯೂಸ್…
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂರ‍್ಯಾಕ್ಟ್ ಸಹಕಾರಿ ಎಂದು ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಹಾಗೂ ಕಮಿನಿಟಿ ಸರ್ವಿಸ್ ನಿರ್ದೇಶಕರಾದ ಜಿ.ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಸ್ಕೂಲ್ ಆಯೋಜಿಸಿದ್ದ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾಭ್ಯಾಸದ ಜತೆಯಲ್ಲಿ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವುದನ್ನು ಇಂರ‍್ಯಾಕ್ಟ್ ಕ್ಲಬ್ ಕಲಿಸುತ್ತದೆ. ವಿದ್ಯಾರ್ಥಿಗಳ ಉನ್ನತಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಉಪಯುಕ್ತ ಆಗುವ ರೀತಿಯಲ್ಲಿ ರೋಟರಿ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ವಿದ್ಯಾರ್ಥಿಗಳು ಇಂರ‍್ಯಾಕ್ಟ್ ಕ್ಲಬ್‌ನಲ್ಲಿ ಸೇರ್ಪಡೆ ಆಗುವುದರಿಂದ ಬೇರೆ ಜಿಲ್ಲೆಯ, ರಾಜ್ಯದ, ರಾಷ್ಟçದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ವಿಚಾರ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ವಿಭಿನ್ನ ವ್ಯಕ್ತಿತ್ವದ ವಿದ್ಯಾರ್ಥಿಗಳ ಸಂಪರ್ಕ ಸೇತುವೆಯಾಗಿ ಇಂರ‍್ಯಾಕ್ಟ್ ಕ್ಲಬ್ ಕಾರ್ಯ ನಿರ್ವಹಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷರು ಮಂಜುನಾಥ ಮಾತನಾಡುತ್ತಾ ಇಂರ‍್ಯಾಕ್ಟ್ ಕ್ಲಬ್ ನಲ್ಲಿ ವಿದ್ಯಾರ್ಥಿಗಳು ಸ್ವತಹ ತಾವೇ ಕಾರ್ಯಕ್ರಮವನ್ನು ಆಯೋಜಿಸಿ ನಾಯಕತ್ವದೊಂದಿಗೆ ನಡೆಸಿಕೊಳ್ಳುವ ಗುಣಗಳನ್ನು ಕಲಿಯಬಹುದು ಹಾಗೂ ಸಮಾಜಕ್ಕೆ ಅನುಕೂಲವಾಗುವಂತಹ ಆರೋಗ್ಯ ಶಿಬಿರಗಳು , ಸೆಮಿನಾರುಗಳು ಹಾಗೂ ಉತ್ತಮ ಮಟ್ಟದ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ.
ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಈಗಿನ ಕಾಲದಲ್ಲಿ ಅತಿ ಮುಖ್ಯವಾಗಿದೆ ಅದಕ್ಕೆ ಸಹಕಾರಿಯಾಗುವಂತಹ ಇಂರ‍್ಯಾಕ್ಟ್ ಕ್ಲಬ್ ಶಾಲೆಯಲ್ಲಿರುವುದು ಶ್ಲಾಘನೀಯ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಾದ ಕುಮಾರ್, ಅನನ್ಯ, ಆಕಾಶ್ ,ರಾಹುಲ್, ಅಕ್ಷಿತಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಾಲೆಯ ಉಪಾಧ್ಯಕ್ಷರಾದ ರೋ ಆದಿಮೂರ್ತಿ ರವರು ಮಾತನಾಡಿ, ತಂತ್ರಜ್ಞಾನ ಮುಂದುವರೆದAತೆ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಇಂರ‍್ಯಾಕ್ಟ್ ಕ್ಲಬ್‌ನಿಂದ ನಾಯಕತ್ವ ಗುಣ ಹಾಗೂ ಸಮಾಜಸೇವೆ ಮತ್ತು ಭಯ ಹೋಗಲಾಡಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಇಂರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ರಾಹುಲ್ ಜಿ , ಕಾರ್ಯದರ್ಶಿ ಹರ್ಷಿತ್ ಅರ್ ಎಸ್, ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ರೋಟರಿ ಶಿವಮೊಗ್ಗ ಪೂರ್ವ ಶಾಲೆಯ ಕಾರ್ಯದರ್ಶಿ ಚಂದ್ರಶೇಖರಯ್ಯ, ಪ್ರಾಂಶುಪಾಲರು ಸೂರ್ಯನಾರಾಯಣ , ಶಾಲೆಯ ಇಂರ‍್ಯಾಕ್ಟ್ ಕ್ಲಬ್ ಸಂಯೋಜಕ ರಾಮು ಬಿ.ಎಸ್ , ಇನ್ನರ್ವೀಲ್ ಅಧ್ಯಕ್ಷರು ಜಯಂತಿ ವಾಲಿ ಹಾಗೂ ಕಾರ್ಯದರ್ಶಿ ಬಿಂದು ವಿಜಯ್ ಕುಮಾರ್, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.