ಶಿವಮೊಗ್ಗ ನ್ಯೂಸ್…
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ ಸೈಕಲ್ ಜಾತವನ್ನು ಉದ್ಘಾಟಿಸಿದ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡುತ್ತ ಪ್ರತಿ ನಿತ್ಯ ಸೈಕಲ್ ತುಳಿಯುವುದರಿಂದ ದೇಹಕ್ಕೆ ಉತ್ತಮ ದೃಡತೆ ದೊರಕುತ್ತದೆ ಎಂದರು.
ಮನಸ್ಸು ಚಂಚಲವಾಗದೆ, ನಮ್ಮ ಗಮನವೆಲ್ಲ ರಸ್ತೆಯ ಮೇಲೆ ನೆಟ್ಟು ಕಾಲಿನಿಂದ ಪೆಡೆಲ್ ತುಳಿದು ಶಕ್ತಿ ವ್ಯಯಸಿ, ಕೈನಿಂದ ಹಿಡಿತ ಪಡೆದು ರಸ್ತೆಯ ಮೇಲೆ ಸಾಗುವುದೇ ಸೊಗಸು.ಎಲ್ಲಾ ವಯೋಮಾನದವರು ತಮ್ನ ಶಕ್ತಾನುಸಾರ ಸೈಕಲ್ ತುಳಿಯುವುದು ಉತ್ತಮ ಎಂದರು. ಪ್ರತಿದಿನ ತಮ್ಮ ಇಚ್ಛೆಯ ಮೇಲೆ ಸೈಕಲ್ ತುಳಿದರೆ, ವಾರಂತ್ಯದಲ್ಲಿ ಕನಿಷ್ಠ ನೂರು ಕಿ.ಮಿ. ಸೈಕಲ್ ತುಳಿಯಲು ಉತ್ತಮ ಸ್ನೇಹಿತರು ಸಿಗುತ್ತಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಟರಾಜ್ ತಿಳಿಸಿದರು.
ಈ ಸಂಘಟಣೆ ಪ್ರಾರಂಭ ದಿಂದಲೂ ನಗರದಲ್ಲಿ ಉತ್ತಮ ಕಾರ್ಯ ಕೈಗೊಂಡ ಪ್ರಭಾವ ಸಾವಿರಾರು ಜನರು ಪ್ರತಿ ನಿತ್ಯ ಸೈಕಲ್ ತುಳಿಯುತ್ತಿದ್ದಾರೆ, ಉತ್ತಮ ಸ್ನೇಹಿತರನ್ನು ದೊರಕಿಸಿಕೊಟ್ಟಿದ್ದಾರೆ ಎಂದರು. ಸೈಕಲ್ ಉತ್ಸವದ ನರಸಿಂಹಮೂರ್ತಿ, ವೈಹೆಚ್ ಐಎ ಛೇರ್ಮನ್ ಎಸ್.ಎಸ್.ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್, ರವೀಂದ್ರ, ರಜಿನಿ, ಮೊಹಮದ್ ರಫಿ, ಮಲ್ಲಿಕಾರ್ಜುನ ಪಾಟೀಲ್ ಮುಂತಾದವರು ಮುಂದಾಳತ್ವ ವಹಿಸಿದ್ದರು. ಜಿ.ವಿಜಯಕುಮಾರ್ ಸ್ವಾಗತಿದರು, ಗಿರೀಶ್ ಕಾಮತ್ ಎಲ್ಲರಿಗೂ ವಂದಿಸಿದರು.