02/11/21 ಶಿವಮೊಗ್ಗ ನಗರದ ವಿನೋಬ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಪುಟ್ ಪಾತ್ ಸಂಪೂರ್ಣ ಆಕ್ರಮಣ ಸಾರ್ವಜನಿಕರ ದೂರಿನ ಅನ್ವಯ ಇಂದು ಕರ್ನಾಟಕದ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ವಿನೋಬನಗರದ ಬೀದಿ ಬದಿ ವ್ಯಾಪಾರಿಗಳ ಸ್ಥಳಕ್ಕೆ ಕುದ್ದು ಭೇಟಿ ನೀಡಿದರು.
ಡಿವಿಎಸ್ ಶಾಲೆಯ ತಿಂಡಿ ಗಾಡಿಗಳು ರಸ್ತೆಯ ಬಿಟ್ಟು ಒಂದು ಬದಿ ಒಂದೇ ಸಾಲಿನಲ್ಲಿ ವ್ಯಾಪಾರ ಮಾಡಲು ಹೇಳಲಾಯಿತು, ಪೊಲೀಸ್ ಚೌಕಿ ಬಳಿ ರಸ್ತೆಯ ಬಳಿ ಬಂದ ಬಾಳೆಹಣ್ಣು ವ್ಯಾಪಾರಿಗಳನ್ನು ಒಂದು ಬದಿ ತರಲಾಯಿತು, ಕರಿಯಣ್ಣ ಸ್ಟಾಪ್ ಬಳಿ ವ್ಯಾಪಾರಿಗಳು ರಸ್ತೆಗೆ ಬಂದವರ ತೆರವುಗೊಳಿಸಿ ಒಂದು ಬದಿ ತರಲಾಯಿತು, ಇವರ ಬಳಿ ಗುರುತಿನ ಚೀಟಿ ಇಲ್ಲ,
ಎಪಿಎಂಸಿ ಕ್ರಾಸ್ ಬಳಿ ಹೋದಾಗ ತರಕಾರಿ, ಸೋಪು, ಹಣ್ಣುಗಳ ಅಂಗಡಿ ಮಳಿಗೆ ಬಾಡಿಗೆ ಪಡೆದ ಮಾಲಿಕರೇ ಪುಟ್ ಪಾತ್ ಹಾಗೂ ಸೈಕಲ್ ಪಾತನ್ನು ಬಿಡದೆ ರಸ್ತೆಗೆ ಬಂದು ವ್ಯಾಪಾರ ಮಾಡುತ್ತಿದ್ದರು, ಕೆಲವರ ಬಳಿ ಮಾತ್ರ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿ ಇತ್ತು, ಅವರು ಎಪಿಎಂಸಿ ರಿಟೈಲ್ ಮಾರಾಟದ ಗೇಟ್ ಬಂದು ಮಾಡಿರುವರು ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂದರು, ಅವರು ಗೇಟ್ನಾ ಬೀಗಾ ತೆಗೆದರೆ ನಾವುಗಳು ಆವರಣದ ಒಳಗೆ ವ್ಯಾಪಾರ ಮಾಡುತ್ತೇವೆ ಎಂದರು,
ಅವರಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಸಂಬಂಧಪಟ್ಟ ಇಲಾಖೆಗಳ ನಿಯಮಗಳನ್ನು ಪಾಲನೆ ಮಾಡಬೇಕು, ಪಾಲಿಕೆಗೆ ನಿವುಗಳು ನೀಡಿದ ವ್ಯಾಪಾರದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು. ಪಾಲಿಕೆ ನೀಡಿದ ವ್ಯಾಪಾರದ ಸ್ಥಳದ ಅಳತೆ ಮೀರಬಾರದು, ಕೊರಳಿನಲ್ಲಿ ಗುರುತಿನ ಚೀಟಿ ಇರಬೇಕು. ಹಾಗೂ ಚೀಟಿಯಲ್ಲಿ ಇರುವ ವ್ಯಾಪಾರಿಗಳೇ ಅ ಸ್ಥಳದಲ್ಲಿ ಇರಬೇಕು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಬಂದು ಕೇಳಿದಾಗ ತೋರಿಸಬೇಕು. ಕೆಲವು ಬೀದಿ ಬದಿ ವ್ಯಾಪಾರಿಗಳು ಅವರ ಇವರು ಗೋತ್ತು ಪೋನ್ ಮಾಡಲ್ಲಾ ಎಂದರು, ಅವರಿಗೆ ಯಾರೆ ಗೊತ್ತಿದ್ದರೂ ಕಾನೂನು ಎಲ್ಲಾರಿಗೂ ಒಂದೇ ಎಂದು ಮನವೊಲಿಸಿವ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ದಿನೇಶ್, ಮಣಿ, ರವಿ, ಬಸವರಾಜ್, ರಮೇಶ್, ಆನಂದ. ಹಾಗೂ ಇತರರೂ ಮತ್ತು ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.