ದಿನಾಂಕ-29-10-2021 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾದಿ ಎ ಹುದಾ 3ನೇ ಕ್ರಾಸ್ ನಲ್ಲಿ ಮೊಹಮ್ಮದ್ ಜೈದಾನ್, 22 ವರ್ಷ, ವಾದಿ ಎ ಹುದಾ ಶಿವಮೊಗ್ಗ ಈತನನ್ನು ಈ ಹಿಂದೆ ಮೊಹಮ್ಮದ್ ನಖಿ ಅಲಿಗೆ ಮೊಹಮ್ಮದ್ ಜೈದಾನ್ ಮತ್ತು ಆತನ ಸ್ನೇಹಿತರು ಸೇರಿ ಮಾರಣಾಂತಿಕ ಹಲ್ಲೆ ಮಾಡಿದ ದ್ವೇಶದ ಹಿನ್ನೆಲೆಯಲ್ಲಿ ಮೊಹಮ್ಮದ್ ನಖಿ ಅಲಿ ಮತ್ತು ಆತನ ಸ್ನೇಹಿತ ಸೇರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾರೆ. ಈ ಬಗ್ಗೆ ಗುನ್ನೆ ನಂ 0353/2021 ಕಲಂ 302, 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಪಿಐ ತುಂಗಾನಗರ ಹಾಗೂ ಸಿಬ್ಬಂದಿಗಳ ತಂಡವು ದಿನಾಂಕಃ-02-11-2021 ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರಾದ ಮೊಹಮ್ಮದ್ ನಖಿ ಅಲಿ, 23 ವರ್ಷ, ಲಷ್ಕರ್ ಮೊಹಲ್ಲಾ, ಶಿವಮೊಗ್ಗ ಮತ್ತು ಮೊಹಮ್ಮದ್ ಅಬು ಸ್ವಲೇಹ, 22 ವರ್ಷ, ಇಲಿಯಾಸ್ ನಗರ ಶಿವಮೊಗ್ಗರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಆಯುಧ, ಬೈಕ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತದೆ.