ಶಿವಮೊಗ್ಗ ನ್ಯೂಸ್…
08/11/21 ಶಿವಮೊಗ್ಗ ನಗರದ ಮಿಳಘಟ್ಟದ ಸಂತೆ ಮೈದಾನದ ಬೀದಿ ಬದಿ ವ್ಯಾಪಾರಿಗಳಿಂದ ಕಸದ ರಾಶಿ ಹರಡುವಿಕೆ, ರಸ್ತೆಗೆ ವ್ಯಾಪಾರ ಮಾಡಲು ಬಂದಿರುವ ದೂರಿನ ಅನ್ವಯ ಅವರುಗಳನ್ನು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು ಭೇಟಿ ಮಾಡಿ ಅವರ ಸಮಸ್ಯೆಗಳ ಆಲಿಸಿದರು.
ಖಾಸಗಿ ಬಸ್ ನಿಲ್ದಾಣದಿಂದ ಹೊರಡುವ ಬಸುಗಳಿಗೆ ತೊಂದರೆ ಅಗುವಂತೆ ವ್ಯಾಪಾರ ಮಾಡುತ್ತಿದ್ದರು, ಬಸ್ ಗಳು ಅವಸರದಿಂದ ರಭಸವಾಗಿ ನಿಲ್ದಾಣ ದಿಂದ ಹೊರಗೆ ಹೊರಟರೆ ರಸ್ತೆಯ ಮೇಲೆ ಹರಡಿಕೊಂಡ ತರಕಾರಿಗಳಾಗಲಿ, ಇವುಗಳ ವ್ಯಾಪಾರ ಮಾಡುವ ವ್ಯಾಪಾರಿಗಳಾಗಲಿ ಡ್ರೈವರ್ ಕಣ್ಣಿಗೆ ಕಾಣುವುದಿಲ್ಲ,
ಬಸ್ ವೇಗವಾಗಿ ಚಲಾಯಿಸಿ ಕೊಂಡು ಹೊರಗೆ ಬಂದರೆ, ಬೀದಿಗಳಲ್ಲಿ ಕುಳಿತ ವ್ಯಾಪಾರಿ ಅವರ ಕಣ್ಣಿಗೆ ಬೀಳರು, ರಭಸದಿಂದ ಬಂದ ಬಸ್ ನಿಮ್ಮ ಮೇಲೆ ಚಲಿಸಿದರೆ ಅನಾವುತಗಳು ನಡೆದರೆ. ನಿಮ್ಮನೆ ನಂಬಿಕೊಂಡ ಕುಟುಂಬ ಸದಸ್ಯರ ಗತಿಯೋನು? ಎಂದು ಅವರಿಗೆ ಮನವೊಲಿಸಿ ಅವರಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ವರೆಗೆ, ಮಿಳಘಟ್ಟ ಶಾಲೆಯ ಗೊಡೆಯ ಒಂದು ಬದಿ ಸಾಲಿನಲ್ಲಿ ವ್ಯಾಪಾರ ಮಾಡಲು ಕೂರಿಸಲಾಯಿತು.
ನಿಮ್ಮಲ್ಲಿ ಸಂಗ್ರಹವಾಗುವ ಕಸದ ರಾಶಿ ಎಲ್ಲೆಂದರಲ್ಲಿ ಎಸೆಯದೆ ಘಂಟೆ ಗಾಡಿಗೆ ನೀಡುವಂತೆ, ನಿವೂಗಳು ಹರಡುವ ಕಸದಿಂದ ಸಾಂಕ್ರಾಮಿಕ ರೋಗರುಜಿನಗಳು ಬರುತ್ತಿವೆ. ನಿವೂಗಳು ಕಾನೂನು ನಿಯಮಗಳನ್ನು ಪಾಲಿಸುವಂತೆ ಹೇಳುವುದರ ಜೊತೆಗೆ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪೌರಕಾರ್ಮಿಕರ ಮೇಸ್ತ್ರಿ ಶ್ರೀನಿವಾಸ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.