ಶಿವಮೊಗ್ಗ ನ್ಯೂಸ್…

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳುವ ಸ್ವಚ್ಚತಾ ಅಭಿಯಾನವನ್ನು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀಮತಿ ಸುನೀತಾ ಅಣ್ಣಪ್ಪ ಅವರ ಮುಂದಾಳತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಗೋಪಾಳದಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸ್ವಚ್ಚತಾ ಅಭಿಯಾನವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಧೀರರಾಜ್ ಹೊನ್ನವಿಲೆ, ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಯಮುನಾ ರಂಗೇಗೌಡ, ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯರು ಹಾಗೂ ನಿಕಟಪೂರ್ವ ಮಹಾಪೌರರಾದ ಶ್ರೀಮತಿ ಲತಾ ಗಣೇಶ್, ಆಯುಕ್ತರಾದ ಚಿದಾನಂದ ವಠಾರೆ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಅಧಿಕಾರಿಗಳು.

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಯುತ ಮಾರಪ್ಪ, ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀಯುತ ಅಮೋಘ್,ಪರಿಸರ ಅಭಿಯಂತರರಾದ ಅಕ್ಕಮಹಾದೇವಿ, ಆರೋಗ್ಯ ನಿರೀಕ್ಷಕರಾದ ವೇಣುಗೋಪಾಲ್, ವಿಜಯ್ ಕುಮಾರ್, ಕೃಷ್ಣ ಮೂರ್ತಿ, ವಸಂತ್ ಕುಮಾರ್, ಸುರೇಶ್ ಕುಮಾರ್, ಶೈಲಜಾ, ನಿಶಾ,ಲಕ್ಕಣ್ಣ, ಲೋಹಿತ್,ಮೊಯಿದ್ದೀನ್, ವಿಶ್ವಾಸ್ ಹಾಗು ಪಾಲಿಕೆ ಸಿಬ್ಬಂದಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…