ಭದ್ರಾವತಿ ನ್ಯೂಸ್…

ದಿನಾಂಕಃ-09-11-2021 ರಂದು ಮದ್ಯಾಹ್ನ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿ ಕಡೆಯಿಂದ ಜಟ್ ಪಟ್ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್.ಐ ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀಸಾಮಿಲ್ ಹತ್ತಿರ ಹೋಗುತ್ತಿರುವಾಗ ಅನುಮಾನಾಸ್ಪದವಾಗಿ ಕಂಡುಬಂದ ಇಬ್ಬರು ವ್ಯಕ್ತಿಗಳನ್ನು ತಡೆದು ತಪಾಸಣೆ ಮಾಡಿದಾಗ ಆರೋಪಿತರ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾ ಇರುವುದು ಕಂಡು ಬಂದಿರುತ್ತದೆ.

ನಂತರ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದಾಜು ಮೌಲ್ಯ 25,000/- ರೂಗಳ ಒಟ್ಟು 1 ಕೆಜಿ 55 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ದ ಗುನ್ನೆ ಸಂಖ್ಯೆ 0137/2021 ಕಲಂ 20(B)(ii)(b) NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…