ಗಂಗಾವತಿ ನ್ಯೂಸ್…

ಕನ್ನಡ ಚಿತ್ರರಂಗದ ಪವರ್*ಪುನೀತ್ ರಾಜ್ ಕುಮಾರ್ ಅಪ್ಪು ಅಪ್ಪುವನ್ನು ಪ್ರೀತಿಸದವರಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅಪ್ಪುವಿನ ಅಭಿಮಾನಿಗಳು ಇದ್ದಾರೆ .ನಿತ್ಯವೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪುವಿನ ಸಮಾಧಿ ದರ್ಶನ ಮಾಡಲು ನಾಡಿನ ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಅವರ ಅಭಿಮಾನಿಗಳು ಬರುತ್ತಿದ್ದಾರೆ .ಈ ಮಧ್ಯೆ ಅಪ್ಪು ಅಭಿಮಾನಿಗಳು ಅವರಂತೆ ಚಾರೀಟಿ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ .ಗಂಗಾವತಿ ನಗರದ ಹಿರಿಯ ರಂಗಭೂಮಿ ಕಲಾವಿದ ಅಮರೇಶಪ್ಪ ಇಂಗಳಗಿ ಅವರ ಮೊಮ್ಮಗ ಚಂದನ್ ಮಲ್ಲಿಕಾರ್ಜುನ.

ಇಂಗಳಗಿ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ.ಗಂಗಾವತಿ ಹಂಪಿ ಸುತ್ತ ಪುನೀತ್ ಅವರ ಸಿನಿಮಾ ಶೂಟಿಂಗ್ ಇದ್ದರೆ ಅವರ ಪಾಲಕರನ್ನು ಒತ್ತಾಯಿಸಿ ಶೂಟಿಂಗ್ ನೋಡಲು ಚಂದನ್ ಇಂಗಳಿಗಿ ತಪ್ಪದೇ ಹೋಗುತ್ತಿದ್ದ ಇತ್ತೀಚೆಗೆ ಗಂಗಾವತಿ ಹತ್ತಿರ ಜೇಮ್ಸ್ ಸಿನೆಮಾ ಚಿತ್ರೀಕರಣ ಸಂದರ್ಭದಲ್ಲಿ ಪಾಲಕರನ್ನು ಕಾಡಿಬೇಡಿ ಚಂದನ್ ಇಂಗಳಗಿ ಶೂಟಿಂಗ್ ನೋಡಲು ಹೋಗಿದ್ದ ಆ ಸಂದರ್ಭದಲ್ಲಿ ಪುನೀತ್ ಅವರನ್ನ ದೂರದಿಂದಲೇ ಕೈ ಮಾಡಿ ಖುಷಿ ಪಟ್ಟ ಇದನ್ನು ಗಮನಿಸಿದ ಪುನೀತ್ ರಾಜ್ ಕುಮಾರ್ ಚೆಂಡನ್ನು ಹತ್ತಿರ ಕರೆದುಕೊಂಡು ಕುಶಲೋಪರಿಯನ್ನು ವಿಚಾರಿಸಿ ಹೆಸರು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…