ಶಿವಮೊಗ್ಗ ನ್ಯೂಸ್…
ಶಿಶುಗಳ ಮರಣ ಪ್ರಮಾಣ ತಗ್ಗಿಸಿ, ರೋಗ ನಿರೋಧಕ ಶಕ್ತಿ ವೃದ್ದಿಸುವ ಲಸಿಕೆಯಾದ ಪಿಸಿವಿ ( ನ್ಯೂಮೋ ಕಾಕಲ್ ಕಾಂಜುಗೇಟ್ ) ಲಸಿಕೆಯನ್ನು ಸರ್ಕಾರದ ವತಿಯಿಂದ ಪೂರ್ಣ ಉಚಿತವಾಗಿ ಶಿಶುಗಳಿಗೆ ನೀಡಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಸುರೇಖ ಮುರಳೀಧರ್ ರವರು ಬಾಪೂಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿ, ಶಿಶುವಿನ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯವಾದ ಹಾಗೂ ದುಬಾರಿಯಾದ ಈ ಲಸಿಕೆಯನ್ನು ಸರ್ಕಾರ ಸಂಪೂರ್ಣ
ಉಚಿತವಾಗಿ ನೀಡುತ್ತಿದೆ. ತಾಯಂದಿರು ತಮ್ಮ ಶಿಶುಗಳಿಗೆ ಲಸಿಕೆ ಕೊಡಿಸುವಂತೆ, ಕರೆ ನೀಡಿದರು. ಹಾಗೂ ಅತ್ಯಂತ ಅವಶ್ಯವಿರುವ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿರುವ ಸರ್ಕಾರದ ಯೋಜನೆಗೆ ಧನ್ಯವಾದವನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ/ ರೇಣುಕಾ, ಶುಶ್ರೂಶಕಿಯರಾದ ಜಯ್ಯಮ್ಮ, ನಿರ್ಮಲ, ಮುಂತಾದ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.