ಶಿವಮೊಗ್ಗ ನ್ಯೂಸ್…
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರದ ಶಂಕರಮಠ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಇರುವ ಸೋನಾ ಹೋಂಡಾ ಶೋರೂಮಿನಲ್ಲಿ ಸುಮಾರು 250 ಹೋಂಡಾ ಆಕ್ಟಿವಾ 6G ಬೈಕ್ ಮಾರಾಟ ಮಾಡಲಾಗಿದ್ದು 250 ಗ್ರಾಹಕರ ಹೆಸರುಗಳನ್ನು ಲಕ್ಕಿ ಕೂಪನ್ ನಲ್ಲಿ ಹಾಕಲಾಗಿದ್ದು ಅದರಲ್ಲಿ ಎರಡೂ ಲಕ್ಕಿ ಕೂಪನ್ ಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಯುತ ಎಚ್ ಸಿ ಯೋಗೇಶ್ ಅವರು ಎತ್ತುವ ಮೂಲಕ ಲಕ್ಕಿ ಕೂಪನ್ ವಿಜೇತರನ್ನು ಆರಿಸಿ ವಿಜೇತರಿಗೆ ಉಚಿತವಾಗಿ ಬೈಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸೋನ ಹೋಂಡಾ ಸಂಸ್ಥೆಯ ಮಾಲೀಕರಾದ ಶ್ರೀಯುತ ಇಕ್ಬಾಲ್ ಸೇಠ್ , ಸಂಸ್ಥೆಯ ನಿರ್ದೇಶಕರಾದ ಶ್ರೀ ಖಾದರ್ ಬಾಷಾ , ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಅಜ್ಗರ್ ಪಾಷಾ ಹಾಗೂ ಗ್ರಾಹಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.