ಶಿವಮೊಗ್ಗ ನ್ಯೂಸ್…
10/11/21 ಮಲ್ಲೇಶ್ವರ ನಗರ ಗುಂಡಪ್ಪ ಶೆಡ್ (FPA family planning association of India) NGO MEET ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಶೆಟ್ಟಿ ರವರು, ಹದಿಹರೆಯದ ಬಗ್ಗೆ ಮಾಹಿತಿ, ಮುಟ್ಟಿನ ಸಮಸ್ಯೆ ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ, ಮೂಢನಂಬಿಕೆ ಗಳಿಂದ ವಿದ್ಯಾರ್ಥಿಗಳ ಮೇಲಾಗುವ ಮಾನಸಿಕ ಒತ್ತಡ ದ ಬಗ್ಗೆ ವಿವರಿಸಿದ್ದಾರೆ.
ಹಿಂದಿನ ಕಾಲದಲ್ಲಿ ಪ್ರಕೃತಿಯ, ದೈಹಿಕ, ಮಾನಸಿಕ ಬದಲಾವಣೆಯಿಂದ ಹೆಣ್ಣು ಮಕ್ಕಳು 18ವರ್ಷಕ್ಕೆ ಬರುವ ವೇಳೆಗೆ ದೊಡ್ಡವರು ಅಗುತ್ತಿದ್ದರು, ಈಗ ಫಿಜಾ ಬರ್ಗರ್ ಮುಂತಾದ ಆಹಾರ ಸೇವನೆ ಮತ್ತು ಮಕ್ಕಳಿಗೆ ವ್ಯಾಯಾಮ ಇಲ್ಲದೆ ಬರೀ ಟಿವಿ ಮೊಬೈಲ್ ಗಳಿಂದ ಮಕ್ಕಳು ಕುಳಿತಲ್ಲೇ ಕುಳಿತು ದೇಹಕ್ಕೆ ಯಾವುದೇ ಎಕ್ಸಾರ್ಸೈಜ್ ಇಲ್ಲದೆ ಬೇಗ 5ನೇ ತರಗತಿ ಓದುತ್ತಿರುವ ವೇಳೆಗೆ ಋತುಮತಿಯಾಗುತ್ತಿದ್ದು, ಏನೂ ತಿಳಿಯದ ಮಕ್ಕಳಲ್ಲಿ ರಕ್ತಸ್ರಾವ ಕಂಡು ಗಾಬರಿಯಾಗುತ್ತಿರುವರು. ಮನೆಯಲ್ಲಿ ತಾಯಂದಿರು, ತಿಳಿದ ಹಿರಿಯರು ಇಂತಹ ಮಕ್ಕಳಿಗೆ ಪ್ರಕೃತಿಯಲ್ಲಿ ಕಾಲಕಾಲಕ್ಕೆ ಬದಲಾವಣೆಯಾದಂತೆ ಮನುಷ್ಯನ ದೆಹದಲ್ಲೂ ದೈಹಿಕ, ಮಾನಸಿಕ, ಆರೋಗ್ಯ ಬದಲಾವಣೆ ಆಗುವುದು.
ಹಿಂದಿನ ಕಾಲದಲ್ಲಿ ಋತುಚಕ್ರವಾದಗ ಹೆಣ್ಣು ಮಕ್ಕಳಿಗೆ ಅಯಾಸ ಪಡಬಾರದು ಎಂದು ಮೂರು ದಿನ ಐದು ದಿನಗಳ ವರೆಗೆ ವಿಶ್ರಾಂತಿ ಪಡೆಯಲು ಯಾವ ಕೆಲಸವೂ ನೀಡದೆ ಒಂದು ಕಡೆ ಕೂರಿಸುತ್ತಿದ್ದರು, ಆದರೆ ಇಂದು ಇದು ಮೂಢನಂಬಿಕೆಯಾಗಿ ದೇವರ ಕೊಣೆ, ಅಡಿಗೆ ಮನೆ, ಶುಭಕಾರ್ಯಗಳಲ್ಲಿ ಬಾಗವಹಿಸಲು ಬಿಡರು. ಪ್ರಕೃತಿಯ ಬದಲಾವಣೆಯ ಋತುಚಕ್ರವು ಸಾಮಾನ್ಯ, ಮುಟ್ಟಿನ ಮಡಿವಂತಿಕೆ ಬಿಟ್ಟು, ಹೆಣ್ಣಾಗಲಿ ಅಥವಾ ಗಂಡಾಗಲಿ ದಿನನಿತ್ಯ ಸ್ನಾನಮಾಡಿ ತಮ್ಮ ಒಳ ಉಡುಪುಗಳನ್ನು ಹಾಗೂ ಮೇಲು ಉಡುಪು ಬದಲಾಹಿಸಿ, ಬ್ರಾಂಡೆಡ್ ಕಂಪನಿಯದು ಎಂದು ತೊಳಿಯದೆ ಬಳಸುತ್ತಿದ್ದರೆ ರೋಗರುಜಿನಗಳಿಗೆ ಬೇಗನೇ ಆಹ್ವಾನ ನೀಡುತ್ತಿರಿ. ಆದಷ್ಟು ಸ್ವಚ್ಛತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು
ಅತಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಇಂಜಿನಿಯರ್ ಪದವಿ ಪಡೆದ ಯುವಕ ಯುವತಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಇಬ್ಬರಲ್ಲೂ ಸ್ನೇಹ ಬೆಳೆದು, ಪ್ರೀತಿಯಾಗಿ ಮದುವೆ ಮಾಡಿಕೊಂಡು ವಿದೇಶಗಳಿಗೆ ಹನಿಮೂನ್ ಗೆ ಹೋಗಿ ಆರು ತಿಂಗಳು ಕಳೆದ ಮೇಲೆ ಮಗು ಈಗಲೇ ಬೇಡವೆಂದು ಮಾತ್ರೆಯ ನುಂಗಿದರು, ಪರಿಣಾಮ ಮಗುವಿನ ರುಂಡ ಹೋಗಿ, ಹೊಟ್ಟೆಯಲ್ಲಿ ಮುಂಡ ಉಳಿದು ಕೊಂಡು ರಕ್ತಸ್ರಾವ ಅಗುತ್ತಲೇ ಡಾಕ್ಟರ್ ಬಳಿ ಬರುವರು, ಮಗು ಮೊದಲೇ ಸತ್ತು ಹೋಗಿರುತ್ತದೆ ತಾಯಿ ಸಾಯುವ ಹಂತಕ್ಕೆ ಬಂದಾಗ ಹೆಂಡತಿಯ ಉಳಿಸಿ ಎಷ್ಟು ಹಣ ಖರ್ಚು ಅದರು ಪರವಾಗಿಲ್ಲ ಎನ್ನುವರು, ಮದುವೆಯ ಮುಂಚೆಯೇ ಮಕ್ಕಳು ಈಗಲೇ ಬೇಕೋ ಬೇಡವೋ ನಿರ್ಧಾರ ಮಾಡಿ ಡಾಕ್ಟರ್ ಬಳಿ ಬಂದು ಸಲಹೆ ಪಡೆದರೆ ಅವರಿಗೆ ಅದಕ್ಕೆ ಆಪ್ತ ಸಮಾಲೋಚನೆ ಮೂಲಕ ಪರಿಹಾರ ನೀಡುವರು.
ಎರಡು ಮೂರು ಮಕ್ಕಳ ನಂತರ ಅಪ್ರೇಷನ್ ಮಾಡಿಸಿಕೊಳ್ಳುವರು FPAಗೆ ಬಂದರೆ ಕುಟುಂಬ ಯೋಜನೆಯ ಶಸ್ತ್ರ ಚಿಕಿತ್ಸೆ, ಮಾಡಲಾಗುವುದು, ಮತ್ತು ಆಪ್ತ ಸಮಾಲೋಚನೆ, ತಪಾಸಣೆ, ಕೂಡ ಇದೆ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಡಾ.VLS ಕುಮಾರ್ ರವರು, ರಸ್ತೆ ಅಪಘಾತಗಳಲ್ಲಿ ಬಹಳಷ್ಟು ಜನರನ್ನು ಕಳೆದು ಕೊಂಡಿರುವೆವೂ,
ಅಪಘಾತ ವಾದಗ ಅವರಿಗೆ ಸಹಾಯಕ್ಕೆ ಬಂದು ಆಸ್ಪತ್ರೆಗೆ ಸೇರಿಸಿ ಪೊಲೀಸ್ ರಿಗೆ ಮಾಹಿತಿ ನೀಡಿದರೆ, ಪೊಲೀಸರು ಇವರಿಗೆ ವಿಟ್ನೆಸ್ ಅಗಲು ಹೇಳುತ್ತಿದ್ದರು, ಆಸ್ಪತ್ರೆಯವರು ಮೊದಲು ಹತ್ತು ಸಾವಿರ ಹಣ ಕಟ್ಟಿ ಎನ್ನುತ್ತಿದರು, ಜನರು ಇದರ ಭಯದಿಂದ ಯಾರು ಮುಂದೆ ಬರುತ್ತಿರಲಿಲ್ಲ, ಇದನ್ನ ಮನಗೊಂಡು ಸುಪ್ರೀಂಕೋರ್ಟ್ 2016 ರಲ್ಲಿ ಸಹಾಯಕ್ಕೆ ಬರುವರಿಗೆ ತೊಂದರೆ ಮಾಡಬೇಡಿ ಎಂದಿದೆ. ಹಾಗೆ ಆಸ್ಪತ್ರೆಯಲ್ಲಿ ಹಣ ಕೇಳುವರೆಂದು ಹರೀಶ ಸಾಂತ್ವನವೆಂದು ಮೊದಲ ಎರಡು ದಿನದ ಕ್ಲಿನೀಕ್ ಚಾರ್ಜ್ 25 ಸಾವಿರ ರೂಪಾಯಿ ರಾಜ್ಯ ಸರ್ಕಾರ ನೀಡುವುದು.
ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತವೆ ಎಂದು ತಿಳಿಯದು, ಭೂಮಿ ಕಂಪಿಸಿದಾಗ 30 ಸೆಕೆಂಡ್ ಕಂಪಿಸುತ್ತದೆ, ಹಾಗ ಜನರು ಅಲ್ಲಿ ಇಲ್ಲಿ ಓಡದೆ ತಲೆಗೆ ಭದ್ರವಾದ ಪುಟ್ಟಿಯ ಹೊದಿಕೆ ಹೊಂದಿಕೊಂಡು ಗಟ್ಟಿಯಾದ ಗೊಡೆಯ ಬದಿ ಕುಳಿತು ಕೊಳ್ಳಬೇಕು.
ಅಪಘಾತ ವಾದಗ ಮೊದಲ ಹತ್ತು ನಿಮಿಷ, ಒಂದು ಗಂಟೆ ಕಾಲ ಗೊಲ್ಡನ್ ಟೈಮ್, ಎನ್ನುವರು ಅ ಸಮಯದಲ್ಲಿ ಸಮಿಪದ ಆಸ್ಪತ್ರೆಗೆ ಸೇರಿಸಿ ವ್ಯಕ್ತಿಯ ಜೀವ ಉಳಿಸಬಹುದು.
ಹೃದಯಘಾತ ಆದರೆ CPR ಮೂಲಕ ಚಿಕಿತ್ಸೆ ನೀಡಬಹುದು, ಬೆಂಕಿ ಬಿದ್ದಾಗ ಹೊಗೆಯಿಂದ ಮೊದಲು ಹೊರ ಬರಬೇಕು. ನೀರಿಲ್ಲದೆ ಒಂದು ದಿನ, ಆಕ್ಸಿಜನ್ ಇಲ್ಲದೆ ಮೂರು ನಿಮಿಷ ವ್ಯಕ್ತಿ ಬದುಕು ಬಹುದು. ರಾತ್ರಿಯ ವೇಳೆ ಗ್ಯಾಸ್ ಲಿಕೇಜ್ ಅದರೆ ಲೈಟ್, ಪೋನ್ ಆನ್ ಮಾಡದೆ ಮೊದಲು ಕಿಟಕಿಯ ತೆಗೆಯಿರಿ, ಹಸಿ ಗೋಣಿ ಚೀಲ ಗ್ಯಾಸ್ ಮೇಲೆ ಹಾಕಿ.
ಪೊಲೀಸ್ ಇಲಾಖೆಯ 100, ಅಗ್ನಿ ಶಾಮಕ ದಳದ 101, ಆಂಬುಲೆನ್ಸ್ 108, ಎಲ್ಲಾ ಇಲಾಖೆಗಳ ಸಂಬಂಧ ಪಟ್ಟಂತ 112ರ ಸಂಖ್ಯೆ ಹಾಗೆ ಗ್ಯಾಸ್ ಗೆ ಸಂಬಂದ ಪಟ್ಟ 1096 ಸಂಖ್ಯೆ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ FPAನ ಶ್ರೀಮತಿ ಜಯಲಕ್ಷ್ಮಿ , ಮ್ಯಾನೇಜರ್ ಉಮೆಶ್, ರಮ್ಯಾ, ಶೃತಿ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಸುರಕ್ಷದ ಪಾರಿದಾ, ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ ಸಂಘದ ಸದಸ್ಯರು, ಮೇರಿ ಮಕ್ಯೂಲೇಟ್ ಶಾಲೆಯ ಸದಸ್ಯರು, ಅಂಧರ ಶಾಲೆಯ ಶಿಕ್ಷಕರು, ಹಾಗೂ ಇತರೆ NGOನ ಪದಾಧಿಕಾರಿಗಳು ಉಪಸ್ಥಿತರಿದ್ದರು.