ಶಿವಮೊಗ್ಗ ನ್ಯೂಸ್…

ನವಂಬರ್ ೧೪ ರಂದು ಸುಮಾರು ೫೦ ಜನ ಮಾಲಾಧಾರಿಗಳು ಒಂದು ಬಸ್ಸಿನಲ್ಲಿ ಕೋಲಾರದಿಂದ ದತ್ತಪೀಠಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಅನ್ಯಕೋಮಿನ  ಪುಂಡರು ಬಸ್ಸಿನ ಮೇಲೆ ದಾಳಿ ನಡೆಸಿ ಕೆಲವೊಂದು ಮಾಲಾಧಾರಿಗಳ ಮೇಲೆ ಹಲ್ಲೆಯನ್ನು ನಡೆಸಿರುವುದನ್ನು ವಿಶ್ವಹಿಂದೂ ಪರಿಷತ್-ಬಜರಂಗದಳ ತೀವ್ರವಾಗಿ ಖಂಡಿಸಿದೆ.ಕೆಲವು ದಿನಗಳ ಹಿಂದೆ ದತ್ತಪೀಠಕ್ಕೆ ಹಿಂದು ಅರ್ಚಕರನ್ನು ನೇಮಕ ಮಾಡಬೇಕೆಂಬ ಕರ್ನಾಟಕದ ಉಚ್ಚ ನ್ಯಾಯಾಲಯ ನ್ಯಾಯಯುತವಾದ ತೀರ್ಪನ್ನು ಅನ್ಯಕೋಮಿನ ಕೆಲವೊಂದು ವ್ಯಕ್ತಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಹಾಗಾಗಿ ಇಂತಹ ಕೃತ್ಯಗಳನ್ನು ರಾಜ್ಯದಲ್ಲೆಡೆ ಮಾಡಿ ಅಶಾಂತಿ ಸೃಷ್ಟಿ ಮಾಡಲುಸಂಚು ರೂಪಿಸುತ್ತಿದ್ದಾರೆ ಅಂಥವರ ವಿರುದ್ಧ ಸರ್ಕಾರವು ಕಠಿಣ ಕಾನೂನು ಕ್ರಮ ಜರಗಿಸಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳಿಗೆ ಮನವಿ ಮಾಡಿದೆ.

ಮುಂಬರುವ ಡಿಸೆಂಬರ್ ೧೯ ರಂದು ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಭಜರಂಗದಳದ ನೇತೃತ್ವದಲ್ಲಿ ಇಡೀ ರಾಜ್ಯವನ್ನು ಒಳಗೊಂಡಂತೆ ಶಿವಮೊಗ್ಗ ಜಿಲ್ಲೆ ಮತ್ತು ತಾಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದತ್ತಪೀಠಕ್ಕೆ ಭಕ್ತಾದಿಗಳು ಹೊರಡಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಿಗಾ ವಹಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ದುರ್ಗಿ ಪ್ರಖಂಡ (ವಿ.ಹಿಂ.ಪ ಬಜರಂಗದಳ ಅಧ್ಯಕ್ಷರು) ಪ್ರಶಾಂತ್, ವಿ.ಹಿ.ಪನ ಅಧ್ಯಕ್ಷ ಸತೀಶ್  ಮುಂಚೆ ಮನೆ, ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ನಗರ ಅಧ್ಯಕ್ಷ ಸುರೇಶ ಬಾಬು, ಭಜರಂಗದಳ ಕಾರ್ಯಕರ್ತ ಭರತ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…