ಶಿವಮೊಗ್ಗ ನ್ಯೂಸ್…

ಬೆಂಗಳೂರಿನಲ್ಲಿ ಸಾಕಷ್ಟು ಫ್ಯಾಷನ್ ಈವೆಂಟ್ಸ್‌ಗಳಿಂದ ಪ್ರಸಿದ್ದಿ ಪಡೆದಿರುವ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಮೊಟ್ಟ ಮೊದಲ ಬಾರಿಗೆ ಡಿ.೧೬ರಂದು ಶಿವಮೊಗ್ಗದಲ್ಲಿ ಅದ್ದೂರಿ ಫ್ಯಾಷನ್ ಶೋನ ಗ್ರಾಂಡ್ ಫಿನಾಲೆ ಹಮ್ಮಿಕೊಳ್ಳಲಾಗಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಉದಯೋನ್ಮುಖ ಮಾಡೆಲ್‌ಗಳಿಗೆ ವೇದಿಕೆ ಒದಗಿಸುತ್ತಿರುವ ಎಲೈಟ್ ಸ್ಟಾರ್ ಈವೆಂಟ್ಸ್ನ ಗ್ರಾಂಡ್ ಫಿನಾಲೆಗಾಗಿ ರಾಜ್ಯಾದ್ಯಂತ ಮಾಡೆಲ್‌ಗಳನ್ನು ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿದೆ ಎಂದು ಎಲೈಟ್ ಸ್ಟಾರ್ ಈವೆಂಟ್ಸ್ ಸಂಸ್ಥೆಯ ಸ್ಥಾಪಕಿ ಹಾಗೂ ರೂಪದರ್ಶಿ ಗುಣಲಕ್ಷ್ಮೀ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಂಡ್ ಫಿನಾಲೆಗೆ ಸೆಲೆಬ್ರಿಟಿ ಕ್ರೂರಿಗಳು ಬರುವ ಸಾಧ್ಯತೆ ಇದೆ. ಎಲೈಟ್ ಸ್ವಾರ್ ಸಂಸ್ಥೆ ನಡೆಸುತ್ತಿರುವ ಈ ಕಾರ್ಯಕ್ರಮ ಕೇವಲ ಮನರಂಜನೆಗೆ ಸೀಮಿತವಾಗದೆ ಮಾನವೀಯತೆಯ ಹಸ್ತವನ್ನೂ ಕೂಡ ಚಾಚುವ ಯೋಜನೆ ಇದೆ ಎಂದ ಅವರು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳವನ್ನು ಮುಂದೆ ತಿಳಿಸಲಾಗುವುದು ಎಂದರು.೫ ವಿಭಾಗದಲ್ಲಿ ೫ರಿಂದ ೪೫ ವಯಸ್ಸಿನ ಯುವಕ ಯುವತಿಯರಿಗೆ ರಾಜ್ಯಾದ್ಯಂತ ಮಾಡೆಲ್‌ಗಳನ್ನು ಆಡಿಷನ್ ನಡೆಸಿದ್ದು, ಮತ್ತೆ ಆಡಿಷನ್ ನಡೆಸಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಮಾಹಿತಿಗಾಗಿ ೬೩೬೬೨೧೯೧೯೨ ಅಥವಾ ೬೩೬೬೨೬೩೦೩೧ರಲ್ಲಿ ಸಂಪರ್ಕಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರೇಮ್‌ಕುಮಾರ್, ಅನ್ವಿತಾ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…