ರಿಪ್ಪನ್ ಪೇಟೆ ನ್ಯೂಸ್…

ರಿಪ್ಪನಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಸ್ವಯಂ ಸಾರ್ವಜನಿಕರೇ ವೃತ್ತಕ್ಕೆ ಪುನೀತ್ ರಾಜಕುಮಾರ್ ನಗರ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ.

ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂಬ ಹೆಸರನ್ನು ಅಧಿಕೃತಗೊಳಿಸುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಗೆ ಸಾರ್ವಜನಿಕರು ಈ ಸಂಧರ್ಭದಲ್ಲಿ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ಹೊಸನಗರ ತಾಲೂಕ್ ಜನಪರ ಹೋರಾಟ ಸಮಿತಿ ಅಧ್ಯಕ್ಷರಾದ ಆರ್ ಎನ್ ಮಂಜುನಾಥ್,ಗ್ರಾಪಂ ಸದಸ್ಯರಾದ ಜಿ ಡಿ ಮಲ್ಲಿಕಾರ್ಜುನ , ಮಾರುತಿ ,ನಟರಾಜ್,ನಾಗರಾಜ್,ಸತೀಶ್ ಹಾಗೂ ಜಯ ಕರ್ನಾಟಕ ಸಂಘಟನೆಯ ವಿನಾಯಕ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಲೆನಾಡಿನಾದ್ಯಂತ ಕನ್ನಡದ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಹೆಸರನ್ನು ಅನೇಕ ವೃತ್ತ ಹಾಗೂ ಸರ್ಕಲ್ ಗೆ ನಾಮಕರಣ ಮಾಡುವುದರ ಮೂಲಕ ಮಲೆನಾಡಿಗರು ಪುನೀತ್ ರವರಿಗೆ ಗೌರವ ಸೂಚಿಸಿದ್ದಾರೆ.

ವರದಿ ರಫಿ ರಿಪ್ಪನಪೇಟೆ…