ಶಿವಮೊಗ್ಗ ನ್ಯೂಸ್…

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಿ.೧೨ರಂದು ನಡೆಯಲಿದ್ದು, ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ಮತದಾರರು ಬಹುಮತದೊಂದಿಗೆ ಗೆಲ್ಲಿಸಬೇಕೆಂದು ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಚೇತನಾ ಶ್ರೀಕಾಂತ್ ಹೆಗ್ಡೆ ಮನವಿ ಮಾಡಿಕೊಂಡರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ೩೫ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮಹಿಳಾ ಮೀಸಲಾತಿ ಇಲ್ಲದಿದ್ದರೂ ಸಹ ಸ್ಪರ್ಧೆ ಮಾಡುತ್ತಿದ್ದು, ನಮ್ಮ ತಂಡದಲ್ಲಿ ಹಿಂದೆ ಅಧಿಕಾರ ನಿರ್ವಹಿಸಿದ ಯಾವುದೇ ನಿರ್ದೇಶಕರು ಇರುವುದಿಲ್ಲ ಹಾಗೂ ಅವರ ಬಗ್ಗೆ ಯಾವ ದೋಷಣೆ ಅಥವಾ ನಿಂದನಾತ್ಮಕ ಹೇಳಿಕೆಯನ್ನು ನೀಡದೆ ಚುನಾವಣೆ ಎದುರಿಸಲಾಗುವುದು ಎಂದರು.

ತೀರ್ಥಹಳ್ಳಿ ತಾಲೂಕಿನ ಒಕ್ಕಲಿಗರ ಸಂಘದಲ್ಲಿ ಕಳೆದ ೧೧ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವವಿದ್ದು, ಎಂಎ ಪದವಿಧರರಾದ ನಾನು ೮ವರ್ಷ ಉಪನ್ಯಾಸಕಿಯಾಗಿ ಸಹ ಕಾರ್ಯನಿರ್ವಹಿಸಿದ್ದೇನೆ. ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.ನಿರ್ದೇಶಕಿಯಾಗಿ ಆಯ್ಕೆಯಾದರೆ ಮುಂದಿನ ೫ವರ್ಷಗಳ ಅವಧಿಯಲ್ಲಿ ಕೆಂಪೇಗೌಡ ಸಾರ್ವಜನಿಕ ನೀತಿ ಕೇಂದ್ರ ಹಾಗೂ ಸಮಾಜದ ಯುವ ಪೀಳಿಗೆಯು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉತ್ಕಷ್ಟ್ರತೆ ಸಾಧಿಸಲು ನರವಾಗುವ ಕೆಂಪೇಗೌಡ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆ ಸ್ಥಾಪನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಹೊಂದಿದ್ದು, ಮಹಿಳಾ ಅಭ್ಯರ್ಥಿಯಾಗಿರುವ ನನಗೆ ಮತದಾರರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೃತಾರ್ತ್ ಹೆಗ್ಡೆ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…