ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಹೋಟೆಲ್, ಬೇಕರಿ ಮತ್ತು ಕಾಡಿಮೆಂಟ್ಸ್ ತಯಾರಕರು ತ್ಯಾಜ್ಯ ಎಣ್ಣೆ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ತ್ಯಾಜ್ಯ ಎಣ್ಣೆಯನ್ನು ಬಯೋ ಡೀಸೆಲ್ ಆಗಿ ಮರುಬಳಕೆ ಮಾಡುವುದರ ಬಗ್ಗೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಅರಿತುಕೊಳ್ಳಬೇಕು ಎಂದು ಎಫ್.ಎಸ್.ಎಸ್.ಎ.ಐ. ಅಂಕಿತ ಅಧಿಕಾರಿಗಳಾದ ಡಾ. ಮಧು ಹೇಳಿದ್ದಾರೆ.

ಅವರು ಇಂದು ನಗರದ ಮಥುರಾ ರೆಸಿಡೆನ್ಸಿಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ಮತ್ತು ಎಫ್.ಎಸ್.ಎಸ್.ಎ.ಐ. ವತಿಯಿಂದ ಹಮ್ಮಿಕೊಂಡಿದ್ದ ತ್ಯಾಜ್ಯ ಎಣ್ಣೆ ಬಯೋ ಡೀಸೆಲ್ ಆಗಿ ಮರುಬಳಕೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತ್ಯಾಜ್ಯ ಎಣ್ಣೆ ಮರುಬಳಕೆ ಮಾಡುವುದರಿಂದ ಬೊಜ್ಜು, ಕೊಲೆಸ್ಟರಾಲ್, ಟಾಕ್ಸಿನ್ ಉತ್ಪಾದನೆ ಆಗಿ ದೇಹದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ನಾವು ಸೇವಿಸುವ ಆಹಾರ ಒಳ್ಳೆಯ ಗುಣಮಟ್ಟದ್ದಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಇ –ಟ್ರೇಡ್ ಇಂಡಿಯಾ ಇ –ಟ್ರೈ ಚಾಲೆಂಜಸ್ ಕಲ್ಪನೆಯಡಿ ಇಡೀ ದೇಶದಲ್ಲಿ 109 ಸ್ಮಾರ್ಟ್ ಸಿಟಿಯಲ್ಲಿ ಇ -ಟ್ರೈ ಚಾಲೆಂಜಸ್ ನೋಂದಣಿ ಮಾಡಿದ್ದಾರೆ. ಅದರಲ್ಲಿ ಇಂತಹ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸುವುದು ಕೂಡ ಒಂದಾಗಿದೆ ಎಂದರು.ಖರೀದ ಎಣ್ಣೆಯನ್ನು ಖರೀದಿ ಮಾಡಲು ಬಯೋ ಡೀಸೆಲ್ ಉತ್ಪಾದಕರು ಈಗಾಗಲೇ ಮುಂದೆ ಬಂದಿದ್ದು ಶಿವಮೊಗ್ಗದ ಜೆ.ಎನ್.ಎನ್.ಸಿ.ಇ.ನಲ್ಲಿ ಒಂದು ಘಟಕ ಇದೆ. ಆರ್.ಯು.ಜಿ.ಒ. ಅಡಿಯಲ್ಲಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವ್ಯಾಪಾರಸ್ಥರು ಬಯೋ ಡೀಸೆಲ್ ಉತ್ಪಾದಕರ ಜೊತೆಗೆ ಒಪ್ಪಂದ ಮಾಡಿಕೊಂಡು ಇದರ ಸದುಪಯೋಗ ಪಡೆಯಬಹುದಾಗಿದೆ.

ಒಬ್ಬ ವ್ಯಾಪಾರಿ ಎಷ್ಟು ಲೀಟರ್ ಎಣ್ಣೆ ಖರೀದಿಸಿದ್ದಾನೆ. ಉಪಯೋಗ ಮಾಡಿದ್ದಾನೆ ಮತ್ತು ಎಷ್ಟು ಬಯೋಡೀಸೆಲ್ ಆಗಿದೆ ಎಂಬುದರ ನಿಖರ ಲೆಕ್ಕ ಪಡೆದು ಗುಣಮಟ್ಟ ಅಳೆಯಬಹುದಾಗಿದೆ ಎಂದರು.ಇತ್ತೀಚೆಗೆ ಆಹಾರ ತಯಾರಿಕಾ ಸಂಸ್ಥೆಗಳಿಗೆ ಐಜಿಂಗ್ ರೇಟಿಂಗ್ ನೀಡಲಾಗುತ್ತಿದ್ದು, ಪ್ರತಿಯೊಂದು ಆಹಾರ ತಯಾರಿಕಾ ಯುನಿಟ್ ಗಳು ಅವರು ತಯಾರಿಸುವ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ, ಬಳಸುವ ಪದಾರ್ಥಗಳ ಮೇಲೆ ಈ ಸಂಸ್ಥೆ ರೇಟಿಂಗ್ ನೀಡುತ್ತಿದ್ದು, ಪ್ರಮಾಣ ಪತ್ರ ಕೂಡ ನೀಡುತ್ತಿದೆ. ಇದರಿಂದ ಸ್ಟಾರ್ ರೇಟಿಂಗ್ ಪಡೆದ ಸಂಸ್ಥೆಗಳ ಗುಣಟ್ಟಕ್ಕೆ ಅಧಿಕ ಬೇಡಿಕೆ ಇದೆ. ಆನ್ ಲೈನ್ ನಲ್ಲಿ ತ್ಯಾಜ್ಯ ಎಣ್ಣೆ ಮರುಬಳಕೆ, ವಿಲೇವಾರಿ, ಗುಣಮಟ್ಟದ ಆಹಾರ ತಯಾರಿಕೆಯ ಎಲ್ಲಾ ಮಾಹಿತಿ ಲಭ್ಯವಿದ್ದು, ಎಲ್ಲಾ ಸ್ಮಾರ್ಟ್ ಸಿಟಿಗಳಲ್ಲೂ ಕೂಡ ಯೋಜನೆಯ ಒಂದು ಭಾಗವಾಗಿ ನಾಗರಿಕರ ಆರೋಗ್ಯದ ದೃಷ್ಠಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೋಟೆಲ್ ಮಾಲೀಕರು, ಕಾಂಡಿಮೆಂಟ್ಸ್, ಬೇಕರಿ ಮಾಲೀಕರು ಇದರ ಅರಿವನ್ನು ಪಡೆದು ಗುಣಮಟ್ಟದ ಆಹಾರ ಪೂರೈಕೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆ.ಎನ್.ಎನ್.ಸಿ.ಇ. ಉಪ ಪ್ರಾಂಶುಪಾಲರಾದ ಡಾ. ಶ್ರೀಪತಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಯು.ಎಂ. ಶಂಕರನಾರಾಯಣ ಹೊಳ್ಳ, ಫುಡ್ ಕೋರ್ಟ್ ಅಧ್ಯಕ್ಷ ನಾರಾಯಣ್, ಚನ್ನವೀರಪ್ಪ ಗಾಮನಗಟ್ಟಿ, ಸ್ಮಾರ್ಟ್ ಸಿಟಿ ಸಿ.ಡಿ.ಒ. ಬಿ. ವರ್ಗೀಸ್ ಇದ್ದರು. ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಎಸ್.ರಂಗನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಹೋಟೆಲ್ ಮಾಲೀಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ದುಷ್ಯಂತ್ ಪಟೇಲ್, ರಾಜೇಶ್ ತ್ಯಾಗರಾಜನ್ ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…