ಶಿವಮೊಗ್ಗ ನ್ಯೂಸ್…
ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪರಿಹಾರಧನ 2000 ರೂ.ಗಳನ್ನು ತಕ್ಷಣ ವಿತರಿಸಬೇಕೆಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲಾ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಇಂದು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿತು.
ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಕೋವಿಡ್ ಪರಿಹಾರ ನಿಧಿ 2 ಸಾವಿರ ರೂ.ಗಳನ್ನು ಘೋಷಿಸಿದ್ದು, ಜಿಲ್ಲೆಯಲ್ಲಿ ಇದುವರೆಗೆ ಸಮರ್ಪಕವಾಗಿ ವಿತರಣೆಯಾಗಿರುವುದಿಲ್ಲ.ಆದ್ದರಿಂದ ತಕ್ಷಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ವಿತರಿಸಬೇಕೆಂದು ಸಂಘ ಆಗ್ರಹಿಸಿದೆ. ಒಂದುವೇಳೆ ಪರಿಹಾರ ಧನ ವಿತರಣೆ ಮಾಡದೇ ಇದ್ದಲ್ಲಿ ಸಂಘದ ಗೌರವಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕ ಇಲಾಖೆಯ ಕಚೇರಿ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಕುಪೇಂದ್ರ ಆಯನೂರು, ಉಪಾಧ್ಯಕ್ಷರಾದ ಪ್ರದೀಪ್ ಹೊನ್ನಪ್ಪ, ನಿರ್ಮಲಾ ಗುಡವಿ, ಪದ್ಮಾ ನವೀನ್, ಸಂಧ್ಯಾ ರಮೇಶ್, ನಿಷ್ಮಾ ರಾಘವೇಂದ್ರ, ಸುರೇಖಾ ಫಾಲಾಕ್ಷಪ್ಪ, ರತ್ನರಾಜು, ಕೇಶವಮೂರ್ತಿ ಪೇಟ್ಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.