ಶಿವಮೊಗ್ಗ ನ್ಯೂಸ್…
ಶಿವಮೊಗ್ಗದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಎಂಬುವವರಿಗೆ ಸೇರಿದ ಶಿವಮೊಗ್ಗದಲ್ಲಿನ 2 ನಿವಾಸಗಳ ಮೇಲೆ ದಾಳಿ ನಡೆಸಿದ ಎಸಿಬಿ ತಂಡ ಮಾಹಿತಿ ಕಲೆ ಹಾಕಿದೆ.ಎಸಿಬಿ ದಾಳಿ ಸಂದರ್ಭದಲ್ಲಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣ, ನಗದು ಸೇರಿದಂತೆ ಇನ್ನಿತರೆ ಬೆಲೆಬಾಳುವ ವಸ್ತು ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ಚಾಲುಕ್ಯನಗರ ಹಾಗೂ ಗೋಪಾಲ ಬಡಾವಣೆಯಲ್ಲಿರುವ ನಿವಾಸಗಳ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಲಾಗಿದೆ. ಮನೆಯಲ್ಲಿ ಮೂರು ಲಾಕರ್ ಪತ್ತೆ. ದಾಳಿ ಸಂದರ್ಭದಲ್ಲಿ ಮನೆಯಲ್ಲಿ 100 ಗ್ರಾಂ ತೂಕದ ಅರವತ್ತಕ್ಕೂ ಹೆಚ್ಚು ಚಿನ್ನದ ಬಿಸ್ಕೆಟ್ ಹಾಗೂ ಇತರೆ ಆಭರಣ ಪತ್ತೆಯಾಗಿವೆ. ರುದ್ರೇಶಪ್ಪ ಅವರಿಗೆ ಸೇರಿದ ಎರಡು ನಿವಾಸಗಳಲ್ಲಿ ಒಟ್ಟು ಎಂಟು ಕೆಜಿ ಎಷ್ಟು ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ.ಅಲ್ಲದೆ 5 ಕೆಜಿ ಬೆಳ್ಳಿ ಆಭರಣ ವಜ್ರದ ಹಾರಗಳು ಹಾಗೂ 15 ಲಕ್ಷ ರೂ. ನಗದು ಪತ್ತೆ. ರುದ್ರೇಶಪ್ಪ ಅವರು ಆದಾಯ ಮೀರಿ ಅಪಾರ ಪ್ರಮಾಣದಲ್ಲಿ ಆಸ್ತಿ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.