ದಿನಾಂಕ 08 ಹಾಗೂ 09 ರಂದು ಉಜಿರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಮೂರನೇ ರಾಜ್ಯ ಅಧಿವೇಶನ ನಡೆಯಲಿದ್ದು . ಡಾಕ್ಟರ್ ವೀರೇಂದ್ರ ಹೆಗ್ಡೆಯವರು ಈ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ. ಡಾ॥ ನಾ.ಮೊಗಸಾಲೆ ಅವರು ಆದೇಶ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಪ್ರೇಮಶೇಖರ್ ಅವರು ತಿಳಿಸಿದರು.
2ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ನುಡಿ ಸ್ವರಾಜ್ಯ, ನುಡಿ ಸಂಪದ , ಸಾಹಿತ್ಯ ಸಂಸ್ಕೃತಿ ,ಅವಿತಿಟ್ಟ ಅಂಬೇಡ್ಕರ್ ಇತ್ಯಾದಿ ಕೃತಿಗಳು ಬಿಡುಗಡೆಗೊಳ್ಳಲಿವೆ . ಅಧಿವೇಶನದಲ್ಲಿ ರಾಜ್ಯದ ನಾನಾ ಭಾಗಗಳಿಂದ 2ಸಾವಿರಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿಗಳಾದ ಮಾಧವ್ ಅವರು ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ 1966 ಅಕ್ಟೋಬರ್ 27 ರಂದು ವಿದ್ಯುಕ್ತವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು .