28/11/21 ಶಿವಮೊಗ್ಗ ನಗರದ, ವಿನೋಬಾ ನಗರ, ಎಪಿಎಂಸಿ ತರಕಾರಿ ಮಾರುಕಟ್ಟೆಯ ಬಳಿ ಹಮ್ಮಿಕೊಂಡಿದ್ದ, ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರಿಂದ ಕರ್ನಾಟಕ ಯುವರತ್ನ, ಯುವಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ನಮನ ಕಾರ್ಯಕ್ರಮಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು. ದೀಪ ಹಚ್ಚಿ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಅಭಿಮಾನಿಗಳು, ಸಾರ್ವಜನಿಕರು, ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಒಂದು ಕ್ವಿಂಟಾಲ್ ಚಿಕ್ಕನ್ ಬಿರಿಯಾನಿ, 30 ಕೆಜಿ ಪಲಾವ್, ಮೊಸರು ಬಜ್ಜಿ, ಪಾಯಾಸವನ್ನು ಸಾರ್ವಜನಿಕರಿಗೆ ಅನ್ನಸಂತರ್ಪಣೆಯಲ್ಲಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮಣಿ ಮೊದಲಿಯಾರ್, ರವಿ ಕುಮಾರ್, ಗೋಪಿ ಮೊದಲಿಯಾರ್, ವರುಣ್, ಸುರೇಶ್, ವೀರೇಶ್, ಪ್ರವೀಣ್, ಕಿರಣ್, ರೂಪೇಶ್, ನಾಗರಾಜ್, ವಿನೋದ್ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.