ಖಚಿತ ಮಾಹಿತಿ ಮೆರೆಗೆ ಅರಣ್ಯ ಇಲಾಖೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮರಗಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ . ತಹಸಿಲ್ದಾರ್ ರಾಣೆ ಸರ್ಕಲ್ ಇನ್ಸ್ ಪೆಕ್ಟರ್ ಮರುಳಸಿದ್ಧಪ್ಪ , ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ಪ್ರಶಾಂತ್ ಕುಮಾರ್ ಅರಣ್ಯ ಅಧಿಕಾರಿಗಳಾದ ಡಿಎಫ್‌ಒ ಮೋಹನ್ ಕುಮಾರ್, ಎಸಿಎಫ್ ಪ್ರವೀಣ್‌ಕುಮಾರ್ ಬಸರೂರು ಮಾರ್ಗದರ್ಶನದಲ್ಲಿ ನೇತೃತ್ವದ ತಂಡದಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಶ್ರೀಕಾಂತ್ ರಾಥೋಡ್, ಮುತ್ತಣ್ಣ, ಹನುಮಂತಪ್ಪ, ಅರಣ್ಯ ವೀಕ್ಷಕ ಮಂಜುನಾಥ್ ಇದ್ದು ದಾಳಿ ನಡೆಸಿದೆ. ಕಡಿತಲೆ ಮಾಡಿದ ಮರಗಳ ಸಮೇತ ಆರೋಪಿತರಾದ ಸುರೇಶ್ ನಾರಾಯಣ ಆಚಾರ್, ಪ್ರಶಾಂತ್ ಪರಶುರಾಮ್, ಕೃತಿಕ್ ಗೋವಿಂದಪ್ಪ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್, ಟ್ರ್ಯಾಕ್ಟರ್, ಮರಗಳ ಕಡಿತಲೆ ಮಿಷನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ನೋಂದಣಿಯಾಗದ ಟ್ರ್ಯಾಕ್ಟರ್‌ಗಳು ಮತ್ತು ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಕಡಿತಲೆಗೊಂಡಿರುವ ಮರಗಳನ್ನು ವಶಕ್ಕೆ ಪಡೆಯಬೇಕಿದ್ದು, ಕೃತ್ಯದಲ್ಲಿ ಪಾಲ್ಗೊಂಡ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ವರದಿ : ರಾಘವೇಂದ್ರ ಬಾಪಟ್ ಸೊರಬ