ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಬಡಾವಣೆಗೆ ಸಂಬಂಧಿಸಿದ ಉದ್ಯಾನವನಕ್ಕೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗಿದೆ.

ರಂಗನಾಥ ಬಡಾವಣೆ ಶ್ರೀ ರಂಗನಾಥ ಬಡಾವಣೆ ನಿವಾಸಿಗಳ ಸಂಘ (ರಿ) ಗೋಪಾಳ ಶಿವಮೊಗ್ಗ ಇವರು ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ತಮ್ಮ ಬಡಾವಣೆಯ ಉದ್ಯಾನವನಕ್ಕೆ
“ಕರ್ನಾಟಕ ರತ್ನ ಪುನೀತ್ ರಾಜಕುಮಾರ್” ಎಂದು ನಾಮಕರಣ ಮಾಡಿದ್ದಾರೆ. ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲರೂ ಸೇರಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.

ಶುಭ ಮರವಂತೆ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರು ಪುನೀತ್ ರಾಜಕುಮಾರ್ ಅವರ ಬಾಲ್ಯದ ಬಗ್ಗೆ ಪುನೀತ್ ರಾಜಕುಮಾರ್ ಲೋಹಿತ್ ಹೆಸರಿನಿಂದ ಪುನೀತ್ ರಾಜಕುಮಾರ್ ಆಗಿ ಆಪ್ಪು ಆಗಿ, ಚಿತ್ರರಂಗದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಸಾಲು ಸಾಲು ಪ್ರಶಸ್ತಿಗಳನ್ನು ಪಡೆದುಕೊಂಡ ಬಗ್ಗೆ, ಮೈಸೂರಿನ ಶಕ್ತಿಧಾಮ ದಿಂದ, ಗೋಶಾಲೆ, ಅನಾಥಾಶ್ರಮ, ಹೀಗೆ ಅವರು ಮಾಡಿರುವ ಸೇವೆಗಳ ಬಗ್ಗೆ ರಂಗನಾಥ ಬಡಾವಣೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪುನೀತ್ ರಾಜಕುಮಾರ್ ಬಗ್ಗೆ ಮತ್ತೊಮ್ಮೆ ವಿಸ್ತಾರವಾಗಿ ತಿಳಿಸಿಕೊಟ್ಟರು.

ಯುವಪ್ರತಿಭೆಗಳನ್ನು ಒಟ್ಟುಗೂಡಿಸಿ ಪುನೀತ್ ರಾಜಕುಮಾರ್ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ನುಡಿನಮನದ ಜೊತೆಗೆ ಹಾಡುಗಳ ಮೂಲಕ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಚಿರಂಜೀವಿ ಬಾಬು ಅವರು ವಹಿಸಿದ್ದರು. ರಂಗ ಬಡಾವಣೆಯ ನಿವಾಸಿಗಳ ಸಂಘದ ಗೌರವಾಧ್ಯಕ್ಷರಾದ ಸ್ವಾಮಿನಾಥನ್ ಅವರು ಮಾತನಾಡಿ ಪುನೀತ್ ರಾಜಕುಮಾರ್ ಅವರು ಯುವಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ಅವರಂತೆ ಎಲ್ಲಾ ಯುವಕರು ಸಮಾಜಸೇವೆಯಲ್ಲಿ ಮುಂದಾಗಬೇಕೆಂದು ಕೋರಿಕೊಂಡರು.

ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಶ್ರೀರಂಗನಾಥ ಬಡಾವಣೆಯ ನಿವಾಸಿಗಳ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಸ್ತ ಅಪ್ಪು ಅಭಿಮಾನಿಗಳಿಗೆ ಚಿರಂಜೀವಿ ಬಾಬು ಅವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…