ಡಿಸಂಬರ್ 1 ಏಡ್ಸ್ ತಡೆಗಟ್ಟುವ ದಿನ, ವಿಶ್ವಾದ್ಯಂತ ಜನಜಾಗ್ರತಿ ಮೂಡಿಸಲು ಕ್ರಮ ಕೈ ಗೊಳ್ಳಲಾಗಿದೆ. ಅಚಾನಕ್ ಈ ಕಾಯಿಲೆಗೆ ತುತ್ತಾಗಿದ್ದರೆ ಹೆದರಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭಾರತೀಯ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ರಾಜೇಶ್ ಸುರಗಿಹಳ್ಳಿಯವರು ಸೈಕಲ್ ಜಾತ ಉದ್ಘಾಟಿಸಿ ನುಡಿದರು.

ಎಡ್ಸ್ ತಡೆಗಟ್ಟುವ ಘಟಕ, ಕಿಮ್ಸ್, ಶಿವಮೊಗ್ಗ ಸೈಕಲ್ ಕ್ಲಬ್ಬಿನ 150ನೇ ಜಾತ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ರೋಟರಿ ಕ್ಲಬ್ ಹಾಗೂ ಅಭಯ ಧಾಮ, ರಕ್ಷ ಸಮುದಾಯ ಸಂಘ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ಸೈಕಲ್ ಜಾತದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ಶ್ರೀ ವೀರಗಾಸೆ ಹವ್ಯಾಸಿ ಕಲಾತಂಡ ಭದ್ರಾವತಿ ಮೂಲಕ ಮುವತ್ತಮೂರು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 2020ರ ರಾಜ್ಯಮಟ್ಟದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ವತ್ರೆಯ ರಕ್ತ ಕೇಂದ್ರಕ್ಕೆ ರಾಜ್ಯದ ಅತ್ಯುತ್ತಮ ಪ್ರಶಸ್ತಿ, ಭದ್ರಾವತಿಯ ನಿರ್ಮಲ ಆಸ್ವತ್ರೆಗೆ ರಾಜ್ಯದಲ್ಲೆ ಅತೀ ಹೆಚ್ಚು ಹೆಚ್.ಐ.ವಿ. ಸೊಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿದ ಖಾಸಗೀ ಆಸ್ವತ್ರೆ ಎಂಬ ಪ್ರಶಸ್ತಿ ದೊರೆತಿದೆ ಎಂದು ಉಪನಿರ್ದೇಶಕರಾದ ಡಾ.ರಘುನಂದನ್ ನುಡಿದರು.

ಪ್ರೌಡ ಶಾಲೆಗಳಲ್ಲಿ ಹದಿಹರೆಯದವರಿಗೆ ಆರೋಗ್ಯ ಕಾರ್ಯಕ್ರಮ ಜಿಲ್ಲೆಯ ನಲವತ್ತೈದು ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕಾರ್ಯ ಕ್ರಮದ ಮೂಲಕ ಹೆಚ್.ಐ.ವಿ.ಮಾಹಿತಿ ಹಾಗೂ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದು ಡಾ.ಅರುಣ್ ತಿಳಿಸಿದರು ಎಡ್ಸ್ ನೊಂದಿಗೆ ಇತ್ತೀಚೆಗೆ ಕರೊನ ಹೊಸ ತಳಿ ವ್ಯಾಪಕವಾಗಿ ಹಬ್ಬುತ್ತಿದ್ದು ಅದನ್ನು ತಡೆಗಟ್ಟಲ್ಲು ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಉತ್ತಮ ಎಂದು ಡಾ.ಶೇಖರ್ ಗೌಳೇರ್ ತಿಳಿಸಿದರು. 2021ರ ಘೋಷ ವಾಕ್ಯ "ಅಸಮಾನತೆಗಳನ್ನು ಕೊನೆಗೊಳಿಸಿ ಏಡ್ಸ್ ನ್ನು ಕೊನೆಗೊಳಿಸಿ ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ" ಎಂದು ಇದೆ ಅದನ್ನು ಎಲ್ಲರೂ ಪಾಲಿಸೋಣ ಎಂದು ಡಾ.ಮಲ್ಲಪ್ಪವಡ್ಲು ಮನೆ ತಿಳಿಸಿದರು. ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಮಲ್ಲಿಕಾರ್ಜುನ್ ಪಾಟಿಲ್, ನರಸಿಂಹಮೂರ್ತಿ, ಮಹ್ಮದ್ ರಫಿ, ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೇಶ್, ರೋಟರಿ ವಿಜಯಕುಮಾರ್, ನಾಗರಾಜ್ ಸೈಕಲ್ ಕ್ಲಬ್ ಸದಸ್ಯರು ಆಸ್ವತ್ರೆ ಸಿಬ್ಬಂದಿ ಭಾಗವಹಿಸಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…