ನವಲಗುಂದ ನ್ಯೂಸ್…
ಈ ಹಿಂದೆ ಸುರಿದ ಅಕಾಲಿಕ ಮಳೆಗೆ ಬಿದ್ದ ಮನೆಯೊಂದಕ್ಕೆ ಸರ್ಕಾರದಿಂದ ಪರಿಹಾರಕ್ಕೆ ರೆಫರ್ ಮಾಡುವ ಕುರಿತಂತೆ, ಹಣಕ್ಕೆ ಬೇಡಿಕೆ ಇಟ್ಟು ತಲಾಠಿಯೊಬ್ಬರು ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ನಡೆದಿದೆ.
ನವಲಗುಂದದ ತಲಾಠಿ ಪ್ರದೀಪ ಬಸವಂತಕರ ಮಳೆಗೆ ಮನೆ ಬಿದ್ದ ವರದಿ ನೀಡಲು ಸಂತ್ರಸ್ತರೊಬ್ಬರಿಂದ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹15 ಸಾವಿರಕ್ಕೆ ಒಪ್ಪಂದವಾಗಿತ್ತು. ಈ ಮಾಹಿತಿಯನ್ನು ಸಂತ್ರಸ್ತೆ ಎಸಿಬಿ ಅಧಿಕಾರಿಗಳಿ ದೂರು ನೀಡಿದರು. ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಟೀಂ ತಲಾಠಿ ಹಣ ಪಡೆಯುವ ಸಂದರ್ಭದಲ್ಲಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸಂತ್ರಸ್ತರಿಗೆ ಮಳೆಯಿಂದ ಬಿದ್ದ ಮನೆಗಳ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಪಿಯ ವಿಚಾರಣೆಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ.