7/12/21 ಕರ್ನಾಟಕ ಸಂಘ, ಮೈನ್ ಮಿಡ್ಲ್ ಶಾಲಾವರಣ, ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರ ಅಧ್ಯಕ್ಷತೆಯ ದಿನಾಂಕ 03/12/21ರಂದು ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆಯೊಂದಿಗೆ ಜಿಲ್ಲಾದ್ಯಂತ ಬೀದಿ ಬದಿಯ ವ್ಯಾಪಾರಿಗಳು ಡಿಸೆಂಬರ್ 10 ರಂದು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ 06/12/2ರ ಸೋಮವಾರ, ಶ್ರೀಮತಿ ಮಂಜುಶ್ರೀ IAS, ಅಭಿಯಾನ ನಿರ್ಧೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇಲಾಖೆ, ಬೆಂಗಳೂರು ಇವರು ರಾಜ್ಯದ ಎಲ್ಲಾ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಹೊರಡಿಸಿ ಬೀದಿ ಬದಿ ವ್ಯಾಪಾರಿಗಳ ಬೇಡಿಕೆಗಳನ್ನು ಈಡೇರಿಸಲು ಮತ್ತು ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ.
ಅದರಿಂದ ಇಂದು ಸಭೆ ಸೇರಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಬಂದ್, ಪ್ರತಿಭಟನೆಯನ್ನು ಹಿಂದೆ ಪಡೆಯಲಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಟಿವಿಸಿ ಸದಸ್ಯರು, ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ನಾರಾಯಣ ಎಂ.ಎಸ್, ಸದಸ್ಯರಾದ ಶ್ರೀ ಮಣಿ ಗೌಂಡರ್, ಶ್ರೀ ಶರತ್ ಸಿಂಗ್, ಶ್ರೀ ಮತಿ ಸವಿತಾ ಶ್ರೀ ನಿವಾಸ ಹಾಗೂ ಇತರರೂ ಉಪಸ್ಥಿತರಿದ್ದರು.