08/12/21 ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಶಿವಪ್ಪನಾಯಕ ವೃತ್ತ. ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಿ.ಈ. ರಂಗನಾಥಸ್ವಾಮಿ ರವರು, ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ರಮ, ಮಹಾ ಪುರುಷರ ಜಯಂತೋತ್ಸವವನ್ನು ರಾಷ್ಟ್ರೀಯ ಹಬ್ಬ-ಹರಿದಿನಗಳಲ್ಲಿ ಸ್ವಚ್ಛತೆ ಹಾಗೂ ಗಿಡಗಳ ನೆಡುವುದರ ಮೂಲಕ ಆಚರಣೆ ಮಾಡುವುದು.
ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಏಕಾಏಕಿ ಒಕ್ಕಲೆಬಿಸಿದಾಗ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಹತಾಸಕ್ಕೆ ಒಳಗಾಗದೆ ಕೈಯಲ್ಲಿ ಪೊರಕೆ ಹಿಡಿದೂ ಧಿಕ್ಕಾರ ಕೂಗದೆ ಸಾರ್ವಜನಿಕರಿಗೆ ಹಾಗೂ ವಾಹನಕ್ಕೆ ಓಡಾಟಕ್ಕೆ ತೊಂದರೆಯಾಗುವಂತೆ ರಸ್ತೆ ತಡೆಮಾಡದೆ ನಗರದ ಸಾರ್ವಜನಿಕರ ತಂಗುದಾಣ, ರಸ್ತೆಗಳ ಸ್ವಚ್ಛತೆಮಾಡಿ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರ ಮನಹೊಲಿಸಿ ಕಾನೂನು ಉಲ್ಲಂಘನೆ ಮಾಡುವವರ, ಸರ್ಕಾರದ ನಿಯಮ ಪಾಲನೆ ಮಾಡದಿರುವರ ಪರ ಸಂಘಟನೆ ಬರುವುದಿಲ್ಲ ಎಂದು ಹೇಳಿ. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವರೆಗೂ ಅವಕಾಶ ಪಡೆಯುವುದರಲ್ಲಿ ಯಶಸ್ವಿಯಾದರು.
ಬಹಳಷ್ಟು ಜನರಿಗೆ ಓದು-ಬರಹ ಬರದಾ ಬೀದಿ ಬದಿ ವ್ಯಾಪಾರಸ್ಥರಿಗೆ ಕುದ್ದು ಬೇಟಿ ಮಾಡಿ, ಸರ್ಕಾರದ ಸವಲತ್ತುಗಳು, ಕೋವಿಡ್ ಲಸಿಕೆ ಬಗ್ಗೆ, ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿ. ಕಸ ಮುಕ್ತ ಪ್ರವೇಶ, ಹಸರೀಕರಣ, ಭ್ರಷ್ಟಾಚಾರ ನಿರ್ಮೂಲನೆ ಇನ್ನೂ ಹಲವಾರು ಕಾರ್ಯಕ್ರಮಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಬೀದಿ ಬದಿ ವ್ಯಾಪಾರಸ್ಥರು ಮಾದರಿಯಾಗಿದೆ ಎಂದು ಹಲವು ಜಿಲ್ಲೆಗಳ ವರದಿಯ ಮೆರೆಗೆ ರಾಜ್ಯದ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಮತ್ತು ಸಮಸ್ಯೆ ಎಂದು ಗಮನಕ್ಕೆ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗೆಹರಿಸಲು ಶ್ರಮಪಡುವ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾಗಿ ಪುನರ್ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ, ರಾಜ್ಯದ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಪರೀಶೀಲನೆ ಮಾಡಿ ಸಮೀಕ್ಷೆಯ ವರದಿ ನೀಡಲು ಆದೇಶ.
ಕರ್ನಾಟಕ ರಾಜ್ಯದ ಬೀದಿ ಬದಿ ವ್ಯಾಪಾರಸ್ಥರ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಬರಲು ಪ್ರತೇಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ ಹಾಗೂ ಜಿಲ್ಲೆಯ ಸಮಸ್ತ ಬೀದಿ ಬದಿ ವ್ಯಾಪಾರಸ್ಥರಿಗೆ ಧನ್ಯವಾದಗಳು ಹೇಳುತ್ತಾ ಈ ಖುಷಿಯ ಸಂದರ್ಭದಲ್ಲಿ ಪಟಾಕಿ ಒಡೆಯುವುದರ ಮೂಲಕ ಸಂಭ್ರಮಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶ್ರೀಮಣಿಗೌಂಡರ್, ಶ್ರೀಮತಿ ರಂಗಮ್ಮ, ರೇಷ್ಮಾ ರವಿ, ಬಸವರಾಜು, ಹಾಗೂ ಇತರರೂ ಉಪಸ್ಥಿತರಿದ್ದರು.