ದಿನಾಂಕ 07-12-2021 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಹತ್ತಿರ ಇರುವ ಶಕ್ತಿಧಾಮ ಬಡಾವಣೆಯಲ್ಲಿ ವ್ಯಕ್ತಿಯೊಬ್ಬನು ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಎಸ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.

ಆರೋಪಿತನಾದ ಪೃಥ್ವಿಕ್ 22 ವರ್ಷ ಗೋಪಾಳ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಆರೋಪಿಯಿಂದ ಅಂದಾಜು ಮೌಲ್ಯ 46,000/- ರೂ ಗಳ ಒಟ್ಟು 1 ಕೆಜಿ 638 ಗ್ರಾಂ ತೂಕದ ಮಾದಕ ವಸ್ತು ಒಣ ಗಾಂಜಾ, 750/- ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ 0454/2021 ಕಲಂ 20(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…