ಕೇಂದ್ರ ಸರ್ಕಾರ ಮನೆ ಬಾಡಿಗೆ ಸಂಬಂಧ ಹೊಸ ಕಾಯಿದೆಯನ್ನು ಅನುಮೋದಿಸಿದ್ದು ಅದರಂತೆ ಬಾಡಿಗೆದಾರರು ಮಾಲೀಕರಿಗೆ 2ತಿಂಗಳ ಅಡ್ವಾನ್ಸ್ ನೀಡಿದರೆ ಸಾಕು. ಹಾಗೂ ಹೊಸ ಕಾಯ್ದೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಬಾಡಿಗೆ ನ್ಯಾಯಾಧಿಕರಣಗಳು ಕಾರ್ಯನಿರ್ವಹಿಸಲಿದ್ದು ಎಲ್ಲಾ ರಾಜ್ಯಗಳು ಜಿಲ್ಲಾಮಟ್ಟದಲ್ಲೇ ಇತ್ಯರ್ಥವಾಗಲಿದೆ.
ಅಂಶಗಳು ಈ ಕೆಳಗಿನಂತಿವೆ.
1.ಮಾಲಿಕ , ಬಾಡಿಗೆದಾರನಿಗೆ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ
2.ಮನೆ/ವಾಣಿಜ್ಯ ಕಟ್ಟಡದ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡ ಬೇಕು
3.ಈ ಪ್ರಾಧಿಕಾರ ಎಲ್ಲ ವಾಣಿಜ್ಯಗಳ ತ್ವರಿತ ಇತ್ಯರ್ಥಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿ ಕೊಡಲಿದೆ
4.ಬಾಡಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಜಿಲ್ಲಾ ಬಾಡಿಗೆ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಕೆ
5.ಮಾಲೀಕ ಬಾಡಿಗೆದಾರರ ನಡುವೆ ಸದಾ ವ್ಯಾಜ್ಯಕ್ಕೆ ಕಾರಣವಾಗುವ ಭದ್ರತಾ ಠೇವಣಿ ಮೇಲೆ ಮಿತಿ
6.ಮಾಸಿಕ ಬಾಡಿಗೆ ಮೊತ್ತದ 2 ತಿಂಗಳ ಹಣವನ್ನು ಮಾತ್ರ ಮನೆಗಳಿಗೆ ಭದ್ರತಾ ಶುಲ್ಕವಾಗಿ ಪಡೆಯಬಹುದು
7.ವಾಣಿಜ್ಯ ಕಟ್ಟಡಗಳಿಗೆ ಮಾಸಿಕ ಬಾಡಿಗೆಯು 6 ಪಟ್ಟು ಹಣವನ್ನು ಮಾತ್ರವೇ ಭದ್ರತಾ ಶುಲ್ಕವಾಗಿ ಪಡೆಯಬಹುದು
8.ಬಾಡಿಗೆ ಒಪ್ಪಂದ ಮುಗಿದ ಬಳಿಕ ಮನೆ ಖಾಲಿ ಮಾಡದೇ ಇದ್ದರೆ ಮಾಲಿಕರಿಗೆ ಕಾಯ್ದೆಯಡಿ ನೆರವು
9.ಒಪ್ಪಂದದ ಬಳಿಕ ಮನೆ ಖಾಲಿ ಮಾಡದಿದ್ದರೆ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆ ದ್ವಿಗುಣ ಮಾಡಬಹುದು
10. 2 ತಿಂಗಳ ಬಳಿಕ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು
11.ಯಾವುದೇ ಭೂಮಾಲೀಕ ಬಾಡಿಗೆದಾರನಿಗೆ 24 ತಾಸುಗಳ ಮೊದಲೇ ನೋಟಿಸ್ ನೀಡಿ ಜಾಗ ಪ್ರವೇಶಿಸುವ ಹಕ್ಕು ಹೊಂದಿರುತ್ತಾನೆ
12.ಮನೆಯಲ್ಲಿ ಬಾಡಿಗೆ ಗಾರನೂ ಕಟ್ಟಡಕ್ಕೆ ಹಾನಿ ಮಾಡಿದರೆ ರಿಪೇರಿಗೆ ಆತನೇ ಹಣ ನೀಡಬೇಕು
13.ಕಟ್ಟಡದಲ್ಲಿ ಅನ್ಯ ಮಾರ್ಪಾಡು ಮಾಡಬೇಕಿದ್ದರೆ ಮಾಲಿಕ ಅದರ ವೆಚ್ಚ ಭರಿಸಬೇಕು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ