ಆಯನೂರಿನಲ್ಲಿ ಮೇ 31 ರ ರಾತ್ರಿ ಬಾರ್ ಒಂದರ ಕ್ಯಾಷಿಯರ್ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯಿಂದ 5 ಲಕ್ಷ ಕಳ್ಳತನವಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಕಳ್ಳರು ಆಯನೂರು ಕುಂಸಿ ಭಾಗದಲ್ಲಿ ಬಾರ್ ಗಳನ್ನೇ ಟಾರ್ಗೆಟ್ ಮಾಡುತ್ತಿರುವುದು ಗಮನಿಸಬೇಕಾದ ಅಂಶ. ಕಳೆದ 3ತಿಂಗಳ ಅವಧಿಯಲ್ಲಿ ಕುಂಸಿಯ ಬಾರೊಂದರಲ್ಲಿ 2 ಸರಣಿ ಕಳ್ಳತನ , ಇತ್ತೀಚೆಗೆ ಆಯನೂರಿನಲ್ಲಿ 1ಬಾರ್ ನಲ್ಲಿ ಕಳ್ಳತನದ ಪ್ರಯತ್ನ ನಡೆದಿತ್ತು ಹಾಗೂ ಈಗ ಬಾರ್ ಕ್ಯಾಶಿಯರ್ ಮನೆಯಲ್ಲಿ ಕಳ್ಳತನ ನಡೆದಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ