ಶಿವಮೊಗ್ಗ: ಪ್ರಾಚೀನ ಸಂಸ್ಕೃತಿಯ ಮರು ಸ್ಥಾಪಿಸುವ ಮಹಾನ್ ಮಹಾತ್ವಕಾಂಕ್ಷಿ ಉದ್ದೇಶದ ಗಂಗಾ ನದಿ ದಡದಲ್ಲಿರುವ ಮರುಸ್ಥಾಪಿತ ಕಾಶಿ ಕ್ಷೇತ್ರದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ನಾಳೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರ ಭವ್ಯ ಕನಸು ಇದಾಗಿದೆ. ಭವ್ಯ ಕಾಶಿ, ದಿವ್ಯಕಾಶಿ ಎಂಬ ಹೆಸರಿನಲ್ಲಿ ಜಗತ್ತೇ ಸಂಭ್ರಮಿಸುವಂತೆ ಈ ಕಾರ್ಯ ನಡೆಯಲಿದೆ. ನಾಳೆ ಇದರ ಉದ್ಘಾಟನೆ ನಡೆಯಲಿದ್ದು, ಅಲ್ಲಿಂದ ಒಂದು ತಿಂಗಳು ಅಂದರೆ ಸಂಕ್ರಾಂತಿ ವರೆಗೂ ಇಡೀ ದೇಶದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಕಾಶಿ ಒಂದು ಅದ್ಭುತ ಅಕ್ಷರಧಾಮವಾಗಿ, ಧಾರ್ಮಿಕ ಕ್ಷೇತ್ರವಾಗಿ ಜಾಗೃತಿಯ ತಾಣವಾಗಿ ಕಂಗೊಳಿಸಲಿದೆ ಎಂದರು.ಇಡೀ ದೇಶವೇ ಸಂಭ್ರಮಪಡುವ ಈ ಕಾರ್ಯಕ್ರಮದ ನೇರಪ್ರಸಾರ ಬಿಜೆಪಿಯ ಮಂಡಲ ವ್ಯಾಪ್ತಿಯಲ್ಲೂ ನಡೆಯುತ್ತದೆ.
ಸುಮಾರು 51 ಸಾವಿರ ಸ್ಥಳಗಳಲ್ಲಿ ಎಲ್ಇಡಿ ಟಿವಿ ಪರದೆಯ ಮೂಲಕ ನೇರ ಪ್ರಸಾರ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ, ದೇವಸ್ಥಾನಗಳಲ್ಲಿ, ಮಠ, ಆಶ್ರಮಗಳಲ್ಲಿ ಈ ಕಾರ್ಯಕ್ರಮವನ್ನು ಸಂಭ್ರಮದಿಂದ ಆಂದೋಲನದ ರೀತಿಯಲ್ಲಿ ನಡೆಯಲಿದೆ ಎಂದರು.ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮ ಕೇವಲ ಕಾರ್ಯಕ್ರಮ ಉದ್ಘಾಟನೆ ಮಾತ್ರ ಆಗಿರುವುದಿಲ್ಲ. ಇದರ ಜೊತೆಗೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳ ಸಭೆ ದೇಶದ ಎಲ್ಲಾ ಮೇಯರ್ ಗಳ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನದಲ್ಲಿ ಶಿವಮೊಗ್ಗದ ಮೇಯರ್ ಸುನಿತಾ ಅಣ್ಣಪ್ಪ ಕೂಡ ಭಾಗವಹಿಸುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಕೃಷಿ ಬಗ್ಗೆ ಚರ್ಚೆ ಕೂಡ ಈ ಅವಧಿಯಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರದ ಕಿರು ಹೊತ್ತಿಗೆ ಕೂಡ ಬಿಡುಗಡೆಯಾಗಲಿವೆ ಎಂದರು.ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಜೊತೆಗೆ ಕೇಂದ್ರ ಸಚಿವರು, ಪ್ರಮುಖವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಲ್ಲದೇ, ಸಾಧು, ಸಂತರು, ಧರ್ಮ ಗುರುಗಳು, ಭಾಗವಹಿಸಲಿದ್ದಾರೆ. ಇಡೀ ಜಗತ್ತೇ ಕಾಶಿಯ ಕಡೆ ನಾಳೆ ನೋಡುತ್ತದೆ. ಕಾಶಿ ವಿಶ್ವನಾಥ ಇಡೀ ಜಗತ್ತಿನ ಗಮನಸೆಳೆಯಲಿದ್ದಾನೆ.
ಪ್ರಾಚೀನ ಸಂಸ್ಕೃತಿಯ ವೈಭವ ಮರುಕಳಿಸಲಿದೆ. ಸಾಮರಸ್ಯ ಏಕತೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಅವು 13ನೇ ಡಿಸೆಂಬರ್ 2021ರಿಂದ ಪ್ರಾರಂಭವಾಗುತ್ತದೆ ಮತ್ತು ಮಕರ ಸಂಕ್ರಾಂತಿ ಅಂದರೆ 14ನೇ ಜನವರಿ 2021 ವರೆಗೆ ಮುಂದುವರಿಯುತ್ತದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದರು. ದಿವ್ಯ ಕಾಶಿ – ಭವ್ಯ ಕಾಶಿ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದ ಪ್ರತಿ ಜಿಲ್ಲೆಗಳಲ್ಲಿ ಡಿಸೆಂಬರ್ 8 ಮತ್ತು 9, 2021 ರಂದು ಪಕ್ಷದ ವತಿಯಿಂದ ಪ್ರಭಾತ್ ಫೇರಿ ನೆರವೇರಿಸಲಾಗಿದೆ. ಇದಲ್ಲದೆ ಡಿಸೆಂಬರ್ 10, 11 ಮತ್ತು 12 ರಂದು ದೇಶಾದ್ಯಂತ ಎಲ್ಲಾ ದೇವಾಲಯಗಳು, ಮಠಗಳು, ಆಶ್ರಮಗಳಲ್ಲಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ “ಸ್ವಚ್ಛತಾ ಅಭಿಯಾನ” ನಡೆಸಲಾಗುತ್ತದೆ. ಇದರಲ್ಲಿ ಜನ ಪ್ರತಿನಿಧಿಗಳು, ಶಾಸಕರು, ಸಂಸದರು/ಸಚಿವರು ಮತ್ತು ಮುಖ್ಯಮಂತ್ರಿಗಳು, ಪಕ್ಷದ ಸಚಿವರು/ಉಪಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಡಿಸೆಂಬರ್ 13 ರ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು, ದೇಶದ ಎಲ್ಲಾ ರಾಜ್ಯಗಳಲ್ಲಿ. ಒಬ್ಬ ಸಂಚಾಲಕ ಮತ್ತು ಇಬ್ಬರು ಸಹ ಸಂಚಾಲಕರನ್ನು ನೇಮಕ ಮಾಡಲಾಗಿದೆ ಎಂದರು. ಬಾಬಾ ವಿಶ್ವನಾಥನ ನಗರವಾದ ಕಾಶಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ 5 ಡಿಸೆಂಬರ್ ನಿಂದ ಆರಂಭವಾಗಿದ್ದು ಅದು 12 ಡಿಸೆಂಬರ್ 2021 ರವರೆಗೆ ನಡೆಯುತ್ತದೆ. ಕಾಶಿಯ ಪ್ರತಿ ವಾರ್ಡ್ನದಲ್ಲಿ ಸ್ವಚ್ಛತೆ ವ್ಯಾಪಕವಾಗಿ ನಡೆಯುತ್ತಿದೆ. ಡಿಸೆಂಬರ್ 13 ರ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು, ಸಂಭಾಷಣೆ ರೂಪದ ಸಂವಾದ ಕಾರ್ಯಕ್ರಮವನ್ನು ಇದೇ 08 ರಿಂದ ಆರಂಭಿಸಲಾಗಿದೆ.
ಡಿಸೆಂಬರ್ 12 ರವರೆಗೆ ಅದು ನಡೆಯಲಿದೆ. ಇದರಲ್ಲಿ, ಮಹಾನಗರ ಮತ್ತು ಕಾಶಿ ಜಿಲ್ಲೆಯ 300 ಸ್ವಯಂಸೇವಕರ ತಂಡವು ಭಾಗವಹಿಸುತ್ತಿದೆ. ಭಜನಾ ಮಂಡಳಿಯೂ ಕಾರ್ಯಕ್ರಮ ನೀಡುತ್ತಿದೆ ಎಂದರು.ಕಾಶಿ ವಿಶ್ವನಾಥ ಧಾಮ್ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಜನರು ಶಿವನನ್ನು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪೂಜಿಸುತ್ತಾರೆ. ಬಿಜೆಪಿ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೆÇೀತ್ಸವ ಮಾಡಲು ಪ್ರಚಾರ ಮಾಡುತ್ತಿದೆ. “ಹಣತೆ ವಿತರಣೆ” ಕಾರ್ಯಕ್ರಮ ಯಶಸ್ವಿಯಾಗಿದೆ. ಹಣತೆ ವಿತರಣೆಯ ವ್ಯವಸ್ಥೆಗೆ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು ಎಂದರು.
ಕಾಶಿ ವಿಶ್ವನಾಥ ಧಾಮದ ಉದ್ಘಾಟನೆ ಸಂದರ್ಭದಲ್ಲಿ, ಎಲ್ಲಾ ದೇವಾಲಯಗಳು, ನಗರದ ಬೀದಿಗಳು, ವೃತ್ತಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಲೇಸರ್ ಶೋ, ಪಟಾಕಿಗಳೊಂದಿಗೆ ಬೆಳಕಿನಿಂದ ಝಗಮಗಿಸಲಿವೆ. ಎಲ್ಲಾ ದೋಣಿಗಳನ್ನು ಅಲಂಕರಿಸಲಾಗುವುದು. ಅವುಗಳಿಗೆ ದೀಪದ ವ್ಯವಸ್ಥೆಯನ್ನೂ ಮಾಡಲಾಗುವುದು. ಕಾಶಿಧಾಮದಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಲು ಉತ್ತರ ಪ್ರದೇಶದ ಸರಕಾರÀದಿಂದ ಬೃಹತ್ ಯೋಜನೆ ರೂಪಿಸಲಾಗಿದೆ. ಪಕ್ಷವೂ ಇದಕ್ಕೆ ಸಹಕರಿಸುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜ್ಞಾನೇಶ್ವರ್, ಎಸ್.ಎನ್. ಚನ್ನಬಸಪ್ಪ, ಹೃಷಿಕೇಶ್ ಪೈ, ಮೋಹನ್, ಕೆ.ವಿ. ಅಣ್ಣಪ್ಪ ಇದ್ದರು.