ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ
ಡಿಸಿಸ್ ಪ್ರಿವೆನ್ಷನ್ ಮತ್ತು ಟ್ರೀಟ್ಮೆಂಟ್ ನ ತಿಂಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಡಾ. ತೇಜಸ್ವಿನಿ ರವರು ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಯ ಬಗ್ಗೆ ವಿವರವಾಗಿ ಮಾತನಾಡುತ್ತಾ ಆಯುರ್ವೇದವು ಋಷಿಮುನಿಗಳು ಕಾಲದಿಂದಲೂ ಶತಮಾನದ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸೆಯು ಭಾರತದಲ್ಲಿ ಸುಪ್ರಸಿದ್ಧ ವಾಗಿ ಗಿಡಮೂಲಿಕೆಗಳಿಂದ ಕೂಡಿ ದಂತಹ ಚಿಕಿತ್ಸೆಗೆ ಹೆಸರುವಾಸಿಯಾಗಿದೆ ಪ್ರಸ್ತುತ ಕಾಲದಲ್ಲಿ ಅತಿ ಹೆಚ್ಚು ಜನರು ಆಯುರ್ವೇದ ಚಿಕಿತ್ಸೆಗೆ ಒಲವು ತೋರಿಸುತ್ತಿದ್ದಾರೆ.

ವಿದೇಶಗಳಲ್ಲಿ ಹಾಗೂ ನಮ್ಮ ದೇಶಗಳಲ್ಲಿ ಈಗಾಗಲೇ ಎಲ್ಲರೂ ಆಯುರ್ವೇದ ಚಿಕಿತ್ಸೆಗೆ ಮೊರೆಹೋಗಿದ್ದು ಅಡ್ಡಪರಿಣಾಮಗಳು ಕಡಿಮೆ ಇರುವುದರಿಂದ ಎಲ್ಲರೂ ಆಯುರ್ವೇದ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆಯಲ್ಲಿ ಎಲ್ಲರೂ ತಪ್ಪು ತಿಳಿದಿರುವ ಹಾಗೆ ಇದು ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ ಎಂದು ಭಾವಿಸಿದ್ದಾರೆ ಆದರೆ ಆಯುರ್ವೇದದಲ್ಲಿ ಚಿಕಿತ್ಸೆಯು ಅತಿ ಶೀಘ್ರದಲ್ಲಿ ಗುಣ ಮಾಡುವಂತಹ ಎಲ್ಲಾ ಔಷಧಿ ಔಷಧಿಗಳು ಲಭ್ಯವಿದ್ದು ರೋಗಿಯ ಪರಿಸ್ಥಿತಿ ಆಲಿಸಿ ಚಿಕಿತ್ಸೆ ನೀಡುವುದು ಆಯುರ್ವೇದದ ನಿಯಮ.
ಪಂಚಕರ್ಮ ಚಿಕಿತ್ಸೆಯಲ್ಲಿ ತುಂಬಾ ಅದ್ಭುತವಾದ ಇತಿಹಾಸವುಳ್ಳ ಚಿಕಿತ್ಸೆ ಬಗ್ಗೆ ವಿವರವಾಗಿ ಮಾತನಾಡಿ ಎಲ್ಲಾ ಮಾಹಿತಿಯನ್ನು ತಿಳಿಸಿದರು.

ಆಯುರ್ವೇದದಲ್ಲಿ ವಾತ ,ಪಿತ್ತ, ಕಫ, ಚಿಕಿತ್ಸೆ ಗಳಿದ್ದು ಅದನ್ನು ರೋಗಿಯ ಪರಿಸ್ಥಿತಿ ಅನುಗುಣವಾಗಿ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತೇವೆ, ಪಂಚಕರ್ಮದ ಬಗ್ಗೆ ತುಂಬಾ ವಿವರವಾಗಿ ಅದ್ಭುತವಾಗಿ ವಿವರಿಸಿದ ಲ್ಲದೆ ಕೆಲವೊಂದು ಉದಾಹರಣೆಗಳನ್ನು ನೀಡಿದರು.ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಮಂಜುನಾಥ್ ಕದಂ ಅವರು ಮಾತನಾಡುತ್ತಾ ಪ್ರಸ್ತುತ ಕಾಲದಲ್ಲಿ ಆಯುರ್ವೇದ ಚಿಕಿತ್ಸೆಯು ತುಂಬಾ ಉಪಯುಕ್ತವಾಗಿದೆ. ನಾವು ಗಮನಿಸಿದಂತೆ ಡೆಂಗ್ಯೂ ಮತ್ತು ಕರೋನ ಅಂತಹ ರೋಗಗಳಿಗೆ ಆಯುರ್ವೇದವು ಪ್ರಮುಖವಾಗಿ ಔಷಧಿಗಳನ್ನು ನೀಡಿದ್ದು ಹೆಚ್ಚು ಅನುಕೂಲವಾಗಿದೆ, ಈ ದಿನ ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ತಿಂಗಳ ವಿಷಯವಾಗಿ ತೆಗೆದುಕೊಂಡಿದ್ದು ಆಯುರ್ವೇದ ಚಿಕಿತ್ಸೆಯ ಬಗ್ಗೆ ಎಲ್ಲರಿಗೂ ತಿಳಿಸುವುದು ಒಳ್ಳೆಯ ವಿಷಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ ,
ರೋಟರಿ ಕಮಿನಿಟಿ ದೆವಲಪ್ಮೆಂಟ್ ನಿರ್ದೇಶಕರಾದ ಜಿ ವಿಜಯಕುಮಾರ್ , ರೋಟರಿ ಜಿಲ್ಲಾ ಸಂಪಾದಕ ವಸಂತ್ ಹೋಬಳಿದಾರ್, ರೋಟರಿ ಸಂಸ್ಥೆಯ ಸದಸ್ಯರಾದ
ಕಡಿದಾಳ್ ಗೋಪಾಲ್, ಗೋಪಾಲ್ ನಾಯಕ್, ನಾಗವೇಣಿ, ಸಂತೋಷ್ ಕುಮಾರ್, ಮಹೇಶ ಏ ಓ, ಗಣೇಶ ಎಸ್ ಮತ್ತೆ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…