16/12/21 ಶಿವಮೊಗ್ಗ ನಗರದ ನೆಹರು ರಸ್ತೆಯ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಲಿಡಕರ್ ಕಛೇರಿಯಲ್ಲಿ ಶಿವಮೊಗ್ಗ ಹಾಗೂ ಕಾರವಾರ ಜಿಲ್ಲಾ ಸಂಯೋಜಕರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ರವರನ್ನು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು ಭೇಟಿ ಮಾಡಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವ ಕುಶಲ ಕರ್ಮಿಗಳ ಬಗ್ಗೆ ಮಾಹಿತಿ ನೀಡಿದರು.
ಹಿಂದಿನ ಕಾಲದ ಕೆಲಸಗಾರರ ನೈಪುಣ್ಯತೆ ಈಗಿರುವ ಕಂಪ್ಯೂಟರ್ ನಲ್ಲಿ ಕಾಣುವುದು ಕಡಿಮೆ, ತಮ್ಮ ಕಸುಬು ಪಾದರಕ್ಷೆ ,ಶೂ, ಪರ್ಸ್, ಬಾಗ್, ಬೆಲ್ಟ್ ಹಾಗೂ ಇತರೆ ಚರ್ಮಗಳಲ್ಲಿ ತಯಾರಿಸುವ ವಸ್ತುಗಳ ಕುಶಲಕರ್ಮಿಗಳ ಕಾಣುವುದು ಕಡಿಮೆ, ಕಂಪ್ಯೂಟರ್ ಯುಗ ಆರಂಭವಾಗಿದೆ. ಚಮ್ಮಾರರು ತಮ್ಮ ಕಸಬನ್ನು ತಮಗೆ ಕೋನೆಗೊಳಿಸುತ್ತಿರುವರು, ಒಮ್ಮೆ ಕರೆಂಟ್ ಕೈಕೊಟ್ಟರೆ ಎಲ್ಲಾ ಕಂಪ್ಯೂಟರ್ ನ ಕೆಲಸ ಸ್ಥಗಿತ. ಬೆರಳೆಣಿಕೆಯಷ್ಟು ಇರುವ ಕುಶಲಕರ್ಮಿ ಚಮ್ಮಾರರ ಹುಡುಕಿ ಅವರಿಗೆ ಸಿಗುವ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯಬೇಕು ಸಮೀಕ್ಷೆ ಮಾಡಿ ಚಮ್ಮಾರರಿಗೆ ಗುರುತಿನ ಚೀಟಿ ನೀಡಿ, ಚಮ್ಮಾರರ ಕಸುಬುಗಳಿಗೆ ಪ್ರೋತ್ಸಾಹ ನೀಡಿ ಗುಡಿ ಕೈಗಾರಿಕೆಗಳು ಬೆಳೆಯುವಂತೆ ಮಾಡಬೇಕು.
ಹಾಲಿನ ಬೂತ್, ಹಾಪ್ ಕಾಮ್ಸ್ ಹಾಗೆ ಚರ್ಮ ಕುಟೀರ ಸಾರ್ವಜನಿಕರಿಗೆ ಅವಶ್ಯಕ, ನಿಜವಾಗಿ ಸಮೀಕ್ಷೆ ಮಾಡದೆ ಕುಶಲಕರ್ಮಿಗಳ ಹುಡುಕದೆ ಸರ್ಕಾರದ ಟಾರ್ಗೆಟ್ ರಿಚ್ ಅಗಲು ವರದಿ ಸಲ್ಲಿಸಲು ಹೋಗಿ ಸಿಕ್ಕ ಸಿಕ್ಕ ವರಿಗೆ ಕುಟೀರ ನೀಡಿರುವುದರಿಂದ ಕೆಲವರು ಅವುಗಳ ಬೇರೆಯವರಿಗೆ ಮಾರಿ ಹೋಗಿರುವರು. ಇನ್ನೂ ಕೆಲವರು ಬಾಡಿಗೆ ನೀಡಿ ಹಣ ಪಡೆಯುತ್ತಿರುವರು, ಅ ಕುಟೀರದಲ್ಲಿ ಟೀ, ಕಾಫೀ, ಬಟ್ಟೆ, ಮೊಬೈಲ್, ಆಪಲ್ ಹಣ್ಣಿನ ಅಂಗಡಿಗಳಾಗಿ ಮಾರ್ಪಟ್ಟಿವೆ. ಅ ಕುಟೀರದ ಬಣ್ಣವಾಗಲಿ ಅಥವಾ ಡಾ.ಬಾಬು ಜಗಜೀವರಾಂ ಚರ್ಮ ಕುಟೀರದ ಪದನಾಮ ಬದಲಾಗಲ್ಲಿಲ, ಇದರಿಂದ ನಿಜವಾಗಿ ಕುಟೀರದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳ ಸಾರ್ವಜನಿಕ ನಾಗರಿಕರು ಹುಡುಕುವುದು ಕಷ್ಟವಾಗಿದೆ.
ನಿಜವಾದ ಕುಶಲಕರ್ಮಿಗಳು ಜಿಲ್ಲೆಯಲ್ಲಿ ಬೀದಿ ಬದಿಯ ಬಿಸಿಲಿನಲ್ಲಿ ಕುಳಿತಿರುವರು, ಕೆಲವರಿಗೆ ನೆರಳಿಗೆ ಛತ್ರಿ ಕೂಡ ಇಲ್ಲ ಎಂದು ಅವರ ಗಮನಕ್ಕೆ ತಂದರು. ಜೊತೆಗೆ ಈಗ ಸರ್ಕಾರ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ (ಡಿಪ್ಲೊಮಾ ಕೋರ್ಸ್ ಗೆ) ಹೆಚ್ಚಿನ ಮಹತ್ವ ನೀಡುತ್ತಿರುವ ಕೋರ್ಸ್ ಗಳ ಬಗ್ಗೆ ಪ್ರತಿ ಹಳ್ಳಿಯ ಗ್ರಾಮದ ಯುವ ಜನತೆಗೆ ತಿಳಿಯುವಂತೆ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ, ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿ, ಗುಡಿ ಕೈಗಾರಿಕೆಗೆ ಮಹತ್ವ ನೀಡಿ ಎಂದು ಹೇಳಿದರು.
ಜಿಲ್ಲಾ ಸಂಯೋಜಕರು ಈಗ ಇ-ಶ್ರಮ್ ಕಾರ್ಡ್ ಪೋರ್ಟನ ಆಡಿ, ಚಮ್ಮಾರರ ಗುರುತಿಸಿ ಶೋ ಮೇಕರ್ ಹಾಗೂ ಲೆದರ್ ವರ್ಕರ್ ಎಂದು ಗುರುತಿಸಿ, ಇ-ಶ್ರಮ್ ಕಾರ್ಡ್ ವಿತರಿಸಲಾಗುವುದು. 30 ಜನರ ಮಹಿಳಾ ಹಾಗೂ ಪುರುಷರ ಗುಂಪಿಗೆ ಶೂ, ಸ್ಲೀಪರ್ ಹಾಗೂ ಪರ್ಸ್, ಬ್ಯಾಗ್, ಹಾಗೂ ಇತರೆ ತಯಾರಿಕೆ ತರಬೇತಿ ನೀಡಲಾಗುವುದು. ಅವರಿಗೆ ಚರ್ಮ ಕುಟೀರ ನೀಡಲಾಗುವುದು. ದುಡಿಮೆ ಬಂಡವಾಳ ಯೋಜನೆಗೆ ಒಂದು ಲಕ್ಷ ಸಾಲಕ್ಕೆ, ಒಂದು ಲಕ್ಷ ಅನುದಾನ, ಸ್ವಾವಲಾಂಬಿ ಮಾರಾಟ ಮಳಿಗೆ ಅಥವಾ ಸಂಚಾರಿ ಮಾರಾಟ ಮಳಿಗೆಗೆ ಮೂರು ಲಕ್ಷ ಸಾಲಕ್ಕೆ ಮೂರು ಲಕ್ಷ ಅನುದಾನ ನೀಡಲಾಗುವುದು. ನಿಮ್ಮ ಮನವಿಗೆ ನಾವು ಚರ್ಮಗಾರರ ಸ್ಥಳಕ್ಕೆ ಬಂದು ಸಮೀಕ್ಷೆ ಮಾಡಿ 16ವರ್ಷ ಮೇಲ್ಪಟ್ಟ 59 ವರ್ಷದ ಒಳಗಿರುವ ಕುಟುಂಬದ ಎಲ್ಲಾ ಸದಸ್ಯರಿಗೂ ಇ-ಶ್ರಮ್ ಕಾರ್ಡ್ ವಿತರಣೆ ಮಾಡುತ್ತೇವೆ ಎಂದು ಜಿಲ್ಲಾ ಸಂಯೋಜಕರಾದ ಮಾನ್ಯ ಶ್ರೀ ಮಲ್ಲಿಕಾರ್ಜುನ ರವರು ಹೇಳಿದರು. ಈ ಸಂದರ್ಭದಲ್ಲಿ ಲಿಡಕರ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.