ಶಿವಮೊಗ್ಗ: ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗುವಂತಹ ಕೃಷಿ ಯಂತ್ರೋಪಕರಣಗಳನ್ನು ಒಟ್ಟಿಗೆ ರಿಯಾಯಿತಿ ದರದಲ್ಲಿ ನೀಡುವ ಉದ್ದೇಶದಿಂದ ನಗರದ ಓಟಿ ರಸ್ತೆಯಲ್ಲಿರುವ ಕೃಷಿ ಇಲಾಖೆ ಆವರಣದ ಕೃಷಿಕ ಸಮಾಜದ ಕಟ್ಟದಲ್ಲಿ ಆರಂಭಗೊಂಡ ತುಳಸಿ ಟ್ರೇಡರ್ಸ್ ಅನ್ನು ಶಾಸಕರಾದ ಆಯನೂರು ಮಂಜುನಾಥ್ ಹಾಗೂ ಎಸ್. ರುದ್ರೇಗೌಡ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಕೃಷಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಂತ್ರೋಪಕರಣ ಬಿಡಿಭಾಗಗಳ ಮಾರಾಟ ಕೇಂದ್ರ ಆರಂಭಿಸಲಾಗಿದೆ. ಇದರಿಂದ ರೈತಿಗೆ ಅನುಕೂಲವಾಗಲಿದೆ. ಸುಲಭ ದರದಲ್ಲಿ ಕೂಡ ಲಭ್ಯವಿದೆ. ಅತ್ಯಂತ ವೈಜ್ಞಾನಿಕ ಉಪಕರಣಗಳು ಇಲ್ಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ರೈತರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ಮಹೇಂದ್ರನಾಥ್, ಗೌತಮ್ ಕಪೂರ್, ಎಂ.ಎಸ್. ಬಾಷ, ಎಸ್.ಪಿ. ತ್ಯಾಗಿ, ರೆಹಮಾನ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…