ಶಿವಮೊಗ್ಗ: ಬೆಂಗಳೂರಿನ ಗ್ರೂಮಿಂಗ್ ಗುರುಕುಲ ವತಿಯಿಂದ ಇಂದು ರಾಯಲ್ ಆರ್ಕಿಡ್ ಸೆಂಟ್ರಲ್ ಹೋಟೆಲ್ ನಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಫ್ಯಾಷನ್ ಶೋ ಹಂಟ್ ಆಡಿಷನ್ ನಡೆಯಿತು. ಈ ಮೆಗಾ ಆಡಿಷನ್ ನಲ್ಲಿ ಆಯ್ಕೆಯಾದವರು ಜನವರಿಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶವಿದ್ದು.
ಇಂದು ಮಿಸ್, ಮಿಸೆಸ್ ಮತ್ತು ಮಿಸ್ಟರ್ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಕಿರುತೆರೆ ಕಲಾವಿದ ಅಭಿನವ ವಿಶ್ವನಾಥನ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಗ್ರೂಮಿಂಗ್ ಸಂಸ್ಥೆಯ ಗೀತಾಶೆಟ್ಟಿ, ನಿರಂಜನಿ, ಪ್ರೀತಿ ರಾಜ್, ಸೋನಾಲಿ, ಕ್ರಿಸ್ ಥಾಮಸ್ ಮೊದಲಾದವರಿದ್ದರು.