ಶಿವಮೊಗ್ಗ: ಬೆಳಗಾಂನಲ್ಲಿ ಎಂಇಎಸ್ ಪುಂಡರು ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕುರುಬರ ಬಳಗ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಸಂಗೊಳ್ಳಿ ರಾಯಣ್ಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಬ್ರಿಟೀಷರ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಇಂತಹ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ದೂರಿದರು.ಬೆಳಗಾವಿಯ ಎಂಇಎಸ್ ಗೂಂಡಾಗಳು ನಾಲ್ಕು ದಿನಗಳ ಹಿಂದೆ ಕರ್ನಾಟಕದ ಭಾವುಟವನ್ನು ಸುಟ್ಟಿದ್ದರು. ಆದರೆ, ಇದುವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಈಗ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿದರೂ ಕೂಡ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿಗರ ಹಿತ ಕಾಪಾಡುತ್ತಿದ್ದಾರೆ. ಇದೊಂದು ಒಲೈಕೆಯ ರಾಜಕಾರಣವಾಗಿದೆ. ಇವರು ಮಂತ್ರಿಯಾಗಿರುವುದೇ ರಾಜ್ಯಕ್ಕೆ ಅವಮಾನ ಎಂದು ಪ್ರತಿಭಟನಾಕಾರರು ದೂರಿದರು.ಕೂಡಲೇ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಮುಖರಾದ ವಾಟಾಳ್ ಮಂಜುನಾಥ್, ರಂಗನಾಥ್, ಗಣೇಶ್ ಬೀಳಗಿ, ಶರತ್, ಮಾರುತಿ, ರಾಕೇಶ್, ಹೆಚ್, ಪಾಲಾಕ್ಷಿ, ಡಿ.ಆರ್. ನಾಗರಾಜ್, ಪುಷ್ಪಲತಾ, ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…