ದಿನಾಂಕಃ-16-12-2021 ರಂದು ಬೆಳಗ್ಗೆ ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡಿದ ಮೊಬೈಲ್ ಫೋನ್ ಗಳನ್ನು ಭದ್ರಾವತಿಯಲ್ಲಿ ಮಾರಾಟ ಮಾಡಲು ಚನ್ನಗಿರಿ ಕಡೆಯಿಂದ ಭದ್ರಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೀಗೇಬಾಗಿಯ ಹತ್ತಿರ ಚನ್ನಗಿರಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ KA14EJ2989 ಡಿಯೋ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು.
ಅನುಮಾನ ಬಂದು ಅವರನ್ನು ತಡೆದು ಪರಿಶೀಲನೆ ಮಾಡಿದಾಗ ಆರೋಪಿಗಳಾದ 1)ಶ್ರೀನಿವಾಸ, 26 ವರ್ಷ, ಭೋವಿ ಕಾಲೋನಿ ಭದ್ರಾವತಿ ಮತ್ತು 2)ಅಜಾಮ್ @ ಬಾಬು, 38 ವರ್ಷ, ದುರ್ಗಿನಗರ ಭದ್ರಾವತಿ ರವರ ಬಳಿ ಬಟ್ಟೆ ಬ್ಯಾಗ್ ನಲ್ಲಿದ್ದ ಅಂದಾಜು ಮೌಲ್ಯ 11,00,000/- ರೂ ಗಳ ಒಟ್ಟು 120 ಸಂಖ್ಯೆಯ ವಿವಿಧ ಕಂಪನಿಯ ಮೊಬೈಲ್ ಫೋನ್ ಗಳು, Dell ಕಂಪನಿಯ 1 ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0161/2021 ಕಲಂ 41(D),102 CRPC, 379 IPCರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.