ಶಿವಮೊಗ್ಗ: ಭದ್ರಾವತಿ ಯುವತಿಯೋರ್ವಳಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.ಡಿಸೆಂಬರ್ 7 ರಂದು ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರ ಗಂಟಲು ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಲಾಗಿತ್ತು. ಇವರಲ್ಲಿ ಓರ್ವ ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಇಂದು ಕೂಡ ಒಮಿಕ್ರೋನ್ ಸ್ಪೋಟವಾಗಿದೆ ಹೊಸದಾಗಿ ಐದು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಧಾರವಾಡದ 54 ವರ್ಷದ ಪುರುಷ, ಭದ್ರಾವತಿಯ 20 ವರ್ಷದ ಯುವತಿ, ಉಡುಪಿಯ 82 ವರ್ಷದ ಪುರುಷ ಮತ್ತು 73 ವರ್ಷದ ಮಹಿಳೆ ಹಾಗೂ ಮಂಗಳೂರಿನ 19 ವರ್ಷದ ಯುವತಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.