ಶಿವಮೊಗ್ಗ: ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆ, ಲಯನ್ಸ್ ಮಹಿಳಾ ಶಾಂಭವಿ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಎಂಇಎಸ್ ಕಿಡಿಗೇಡಿಗಳು ನಾಡಧ್ವಜವನ್ನು ಸುಟ್ಟು ಹೀನಕೃತ್ಯವೆಸಗಿದ್ದಾರೆ. ಇದು ದೇಶದ್ರೋಹಿಗಳ ಕೆಲಸವಾಗಿದೆ. ರಾಜ್ಯ ಇಂತಹ ನೀಚ ಕೆಲಸವನ್ನು ನೋಡಿಯೂ ಶಾಂತಿ ಕದಡುವ ದುಷ್ಟರ ವಿರುದ್ಧ ಪಾಠ ಕಲಿಸದೇ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಆದ್ದರಿಂದ ಈ ಪುಂಡರನ್ನು ಬಂಧಿಸಿ ಅತಿ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಶಾಂತಾ ಸುರೇಂದ್ರ, ಭಾಗ್ಯಲಕ್ಷ್ಮಿ, ಜ್ಯೋತಿ, ಕಲ್ಪನಾ, ಲಲಿತಾ, ಮೀನಾ, ಲಲಿತಾ ಪ್ರಕಾಶ್, ನಂದಿನಿ, ಮಂಜುಳಾ, ಕೀರ್ತಿ, ಮಾಲಾ ಮೊದಲಾದವರಿದ್ದರು.