ಬೆಂಗಳೂರು ಡಿಸೆಂಬರ್ 20: ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ಜೀವನಶೈಲಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.
ಇಂದು ಕನಕಪುರದಲ್ಲಿ ಆಯುಷ್ ತತ್ವಗಳನ್ನು ಉತ್ತೇಜಿಸುವ ಆಯುಷ್ ಅಮೃತವರ್ಷಿಣಿ ಫಾರ್ಮ್ ಲ್ಯಾಂಡ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಪ್ರಪಂಚದಲ್ಲಿ ಜೀವನಶೈಲಿ ವ್ಯತ್ಯಯದಿಂದ ಆಗುವ ಕಾಯಿಲೆಗಳು ಹೆಚ್ಚಿನ ಜನರನ್ನು ಭಾಧಿಸುತ್ತಿವೆ. ಇದಕ್ಕೆ ನಾವು ನಮ್ಮ ಪಾರಂಪರಿಕ ಪದ್ದತಿಯನ್ನು ಅನುಸರಿಸುವುದನ್ನ ಬಿಟ್ಟಿರುವುದು ಪ್ರಮುಖ ಕಾರಣ. ಬಿಎಸ್‌ಆರ್ ಡೆವೆಲಪರ್ಸ್ ಆಯುಷ್ ಅಮೃತವರ್ಷಿಣಿ ಕೃಷಿ ಭೂಮಿಯನ್ನು ಖರೀದಿಸುವ ವಿನೂತನವಾದ ಯೋಜನೆಯನ್ನು ಪ್ರಾರಂಭಿಸಿರುವುದು ಬಹಳ ಸಂತಸದ ವಿಷಯ. ಬೆಂಗಳೂರಿನಿಂದ ಕೇವಲ 1 ಗಂಟೆಯ ಪ್ರಯಾಣ ಮಾಡಿ ಜನರು ತಮ್ಮದೇ ಆದ ಜಮೀನು ಹೊಂದುವ ಆಲೋಚನೆ ಶ್ಲಾಘನೀಯ. ಈ ಜಮೀನಿನಲ್ಲಿ ಸಾವಯವ ಕೃಷಿಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಜೀವನಶೈಲಿಯ ಒತ್ತಡದ ಕಾಯಿಲೆಗಳು ದೂರವಾಗುವ ಅವಕಾಶ ದೊರೆಯಲಿದೆ ಎಂದು ಹೇಳಿದರು.
ಬಿಎಸ್‌ಆರ್ ಡೆವಲಪರ್ಸ್‌ನ ಮಾಲೀಕರಾದ ರಾಮೋಜಿ ಗೌಡ ಅವರು ಮಾತನಾಡಿ, ಕನಕಪುರದಲ್ಲಿ 105 ಎಕರೆ ಕೃಷಿ ಜಮೀನಲ್ಲಿ ಪ್ರಾರಂಭಿಸಲಾಗಿರುವ ಯೋಜನೆ ಇದಾಗಿದೆ. ಆಯುಷ್ ಧೀಮ್ ಫಾರ್ಮ್ ಲ್ಯಾಂಡ್ ಆಲೋಚನೆಯ ಕಾರಣೀಕರ್ತರು ನಾವು ಎನ್ನುವುದು ನಮ್ಮ ಹೆಮ್ಮೆಯಾಗಿದೆ. ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಗ್ರಾಮೀಣ ಸೊಗಡಿನ ಜೀವನದ ಪರಿಚಯ ಮಾಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. 7 ಏಕರೆ ಜಮೀನಿನಲ್ಲಿ ಕ್ಲಬ್‌ಹೌಸ್ ನಿರ್ಮಾಣವಾಗುತ್ತಿದೆ. ಈ ಫಾರ್ಮ್ ಲ್ಯಾಂಡ್ ಕೊಂಡುಕೊಳ್ಳುವವರಿಗೆ ಕ್ಲಬ್ ಸದಸ್ಯತ್ವ ಉಚಿತವಾಗಿದೆ. ಇಂದು ಭೂಮಿ ಖರೀದಿಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಶೇಕಡಾ 50 ರಷ್ಟು ಫಾರ್ಮ್ ಲ್ಯಾಂಡ್ ಖರೀದಿಗೆ ಗ್ರಾಹಕರು ಬುಕ್ ಮಾಡಿದ್ದಾರೆ. ಇಂದು ಬುಕ್ ಮಾಡಿದ 20 ಕ್ಕೂ ಹೆಚ್ಚು ಗ್ರಾಹಕರುಗಳಿಗೆ ಆಯುಷ್ ಅಮೃತವರ್ಷಿಣಿ ವತಿಯಿಂದ ಉಚಿತ ದುಬೈ ಪ್ರವಾಸದ ಟಿಕೆಟ್ ಗನ್ನು ನೀಡಲಾಯಿತು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ತಮ್ಮದೇ ಆದ ಕೃಷಿ ಭೂಮಿಯನ್ನು ಹೊಂದುವ ಸದಾವಕಾಶ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಆರ್ ಡೆವಲಪರ್ಸ್ ಸಂಸ್ಥೆಯ ನೌಕರರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.