ಇಂದಿನಿಂದ ನಮ್ಮ‌ ಟೀಮ್‌ ಉಸಿರು ಅಧಿಕೃತವಾಗಿ ಕೆಲಸ ಆರಂಭ ಮಾಡಲಿದೆ. ಇಂದಿನಿಂದ ವೈದ್ಯರ ಸಲಹೆಯಂತೆ ಆಕ್ಸಿಜನ್ ಕಾನ್ಸಂಟ್ರೇಟರ್ , ಆಕ್ಸಿಜನ್ ಸಿಲೆಂಡರ್ ಬೇಕಾಗುವವರು ಸಂಪರ್ಕಿಸಬಹುದು ಎಂದು ಟೀಮ್ ಉಸಿರು ಸದಸ್ಯರು ತಿಳಿಸಿದ್ದಾರೆ.

ಆದರ್ಶ ಹುಂಚದಕಟ್ಟೆ ಅವರ ನೇತೃತ್ವದಲ್ಲಿ ಟೀಮ್ ಉಸಿರು ಈಗಾಗಲೇ ಹಲವು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಜನರ ಸಂಕಷ್ಟಕ್ಕೆ ನೆರವಾಗಲೆಂದು ವೈದ್ಯರ ಸಲಹೆ ಮೇರೆಗೆ ತೀರ್ಥಹಳ್ಳಿಯಲ್ಲಿ ಮನೆಬಾಗಿಲಿಗೆ ಆಕ್ಸಿಜನ್ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅವಶ್ಯಕತೆ ಇರುವವರು ದಯವಿಟ್ಟು ಕೆಳಗಿನ ನಂಬರ್ ಗೆ ಕರೆ ಮಾಡಬೇಕಾಗಿ ಟೀಮ್ ಉಸಿರು ಸದಸ್ಯರು ಕೇಳಿಕೊಂಡಿದ್ದಾರೆ
Phone : 8660736542

ವರದಿ ಸುಭಾಷ್ ಕುಲಾಲ್ ತೀರ್ಥಹಳ್ಳಿ