ಶಿವಮೊಗ್ಗ: ಶೃಂಗೇರಿ ಸಂಸ್ಥಾನ ನೂರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕ, ಆರೋಗ್ಯ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಹೇಳಿದರು.
ಜಾಹೀರಾತು…ಗಣೇಶ ಎಂ ಅಂಗಡಿ (ಫಾರ್ಮಸಿಸ್ಟ್) ಗಾಜನೂರು ಆದ ನಾನು ಶಿವಮೊಗ್ಗ ಡಿಸ್ಟ್ರಿಕ್ಟ್ ಚೇಂಬರ್ ಆಫ್ ಕಾಮರ್ಸ್ ನಿಂದ ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದೇನೆ.ನನ್ನ ಕ್ರಮ ಸಂಖ್ಯೆ 2ಮತ್ತು ಪರಿವರ್ತನ 11 ಸಮೂಹಕ್ಕೆ ತಮ್ಮ ಮತ ನೀಡಿ ಗೆಲ್ಲಿಸಿ ಕೊಡಬೇಕೆಂದು ವಿನಂತಿ. DRUMUKHA ENTERPRISES ಫಾರ್ಮಾ & ಸರ್ಜಿಕಲ್ ಡಿಸ್ತ್ರಿಬ್ಯೂಟರ್ ಆಗಿದ್ದು ಹೆಲ್ತ್ ಸೆಕ್ಟರ್ ನಿಂದ ಒಬ್ಬನೇ ಸ್ಪರ್ಧಿಸುತ್ತೇನೆ.
ಅವರು ಇಂದು ಕಲ್ಲಹಳ್ಳಿಯ ಮಾಧವನೆಲೆಯಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಸಕ್ಷಮ ಶಿವಮೊಗ್ಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೃಂಗೇರಿ ಪೀಠದಿಂದ ಅರ್ಹ ಫಲಾನುಭವಿಗಳಿಗೆ 10 ತ್ರಿಚಕ್ರದ ಸೈಕಲ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.1200 ವರ್ಷಗಳ ಹಿಂದೆ ಧರ್ಮಕ್ಷೋಭೆ ಉಂಟಾದಾಗ ಭಗವಂತ ಶಂಕರಾಚಾರ್ಯರ ರೂಪದಲ್ಲಿ ಸನಾತನ ಧರ್ಮವನ್ನು ಕಾಪಾಡಿ ನಾಲ್ಕು ದಿಕ್ಕಿನಲ್ಲಿ ಆಮ್ನೇಯ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣಾಮ್ನಾಯ ಶೃಂಗೇರಿ ಪೀಠ ಇದುವರೆಗೆ 36 ಜಗದ್ಗುರುಗಳನ್ನು ಈ ಪೀಠ ಕಂಡಿದ್ದು, ಎಲ್ಲರೂ ಕೂಡ ಸನಾತನ ಧರ್ಮದ ರಕ್ಷಣೆ ಮತ್ತು ಪೋಷಣೆ ಮಾಡಿಕೊಂಡು ಬಂದಿದ್ದಾರೆ.
ಇದೇ ಈ ಪೀಠದ ಉದ್ದೇಶ ಎಂದರು.ಈಗಿನ ಪೀಠಾಧಿಪತಿಗಳಾದ ಭಾರತೀತೀರ್ಥರ ಅಧಿಕಾರದ ಅವಧಿಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಶ್ರೀಮಠದ ವತಿಯಿಂದ ಬೆಂಗಳೂರು, ಹೈದರಾಬಾದ್ ಮತ್ತು ನೋಯ್ಡಾದಲ್ಲಿ ವಿಶೇಷಚೇತನರಿಗಾಗಿಯೇ ದೀಪಿಕಾ ಎಂಬ ಮೂರು ಶಾಲೆಗಳನ್ನು ತೆರೆದು ಸೇವಾ ಚಟುವಟಿಕೆ ನಡೆಸುತ್ತಿದೆ. ಆ ಮಕ್ಕಳಿಗೆ ಯಾರಿಗೂ ಕಡಿಮೆಯಾಗದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಆರೋಗ್ಯವಂತ ವಾತಾವರಣ ನೀಡಲಾಗಿದೆ ಎಂದರು.ಅನೇಕ ಆಸ್ಪತ್ರೆಗಳನ್ನು ತೆರೆದು ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಹೆಣ್ಣು ಮಕ್ಕಳಿಗೆ ಜಗದ್ಗುರುಗಳ ವರ್ಧಂತಿಯಂದು ಉಚಿತವಾಗಿ ಹೊಲಿಗೆ ಯಂತ್ರ ಮತ್ತು ವಿಶೇಷಚೇತನಿಗೆ ತ್ರಿಚಕ್ರ ಸೈಕಲ್ ನೀಡುತ್ತಾ ಬಂದಿದ್ದು, ಈ ಮಕ್ಕಳಿಗೆ ವಿಶೇಷ ಗೌರವ ನೀಡುವಂತೆ ಅವರು ಸಲಹೆ ನೀಡಿದರು.ಮಠ ನೀಡಿದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂಥೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಕ್ಷಮ ಸಂಸ್ಥೆಯ ಕಾರ್ಯದರ್ಶಿ ಕುಮಾರ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಆರಂಭವಾಗಿ ನಾಲ್ಕು ವರ್ಗಳಾಗಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ವಿಕಲಚೇತನರ ಸಂಕಷ್ಟ ಕಂಡು ಸುಮಾರು 120 ಜನರಿಗೆ ಪ್ರತಿತಿಂಗಳು ಇದುವರೆಗೂ ಆಹಾರದ ಕಿಟ್ ವಿತರಿಸುತ್ತಾ ಬಂದಿದೆ. ಆರೋಗ್ಯ ಸೌಲಭ್ಯ ಮತ್ತು ಪುಸ್ತಕಗಳು, ಸ್ಟೇಷನರಿ ಸೇರಿದಂತೆ ಮಕ್ಕಳಿಗೆ ಅನೇಕ ಸಹಕಾರವನ್ನು ಸಂಸ್ಥೆ ನೀಡುತ್ತಿದೆ. ಬುದ್ಧಿಮಾಂಧ್ಯ ಮಕ್ಕಳಿಗೆ ವಿಶೇಷ ಸಲಕರಣೆ ಒದಗಿಸಿದೆ ಎಂದರು. ಕಾರ್ಯಕ್ರಮದಲ್ಲಿ ಸಾಗರದ ಅದಮ್ಯ ಚೇತನ ಶಾಲೆಯ 4 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಕೋಚಿಂಗ್ ಕ್ಯಾಂಪ್ ಗೆ ಆಯ್ಕೆಯಾಗಿದ್ದು, ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರಿಗೂ ಶೃಂಗೇರಿ ಪೀಠದಿಂದ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಕ್ಷಮ ಸಂಸ್ಥೆ ಅಧ್ಯಕ್ಷರಾದ ಡಾ. ಪ್ರಶಾಂತ್ ಇಸ್ಲೂರ್, ರಮೇಶ್ ಪ್ರಭು, ಗಣೇಶ್ ಪ್ರಸಾದ್, ಉದಯ್ ಕುಮಾರ್, ಶಿವಕುಮಾರ್ ಮೊದಲಾದವರಿದ್ದರು.