ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿಯ ಘಟಕದ ನೂತನ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪನವರಿಗೆ ಘಟಕದ ವಿಶೇಷ ಆಹ್ವಾನಿತ ಸದಸ್ಯರು ಹಾಗೂ ಮಾರ್ಗದರ್ಶಕ ಸಮಿತಿಯ ಪ್ರಮುಖರಾದ ಜೆಸಿ.ಎಂ ಶ್ರೀಕಾಂತ್ ರವರು ಗೌರವ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಘಟಕದ ಸ್ತಾಪಕ ಅಧ್ಯಕ್ಷರಾದ ಜೆಸಿ.ಜ್ಯೋತಿ ಅರಳಪ್ಪ, 2020ರ ಅಧ್ಯಕ್ಷರಾದ ಜೆಸಿ.ಗಾರಾ.ಶ್ರೀನಿವಾಸ್, 2021ರ ಅಧ್ಯಕ್ಷರಾದ ಜೆಸಿ.ಮೋಹನ್ ಕಲ್ಪತರು, ಹಾಗೂ ಕಾರ್ಯದರ್ಶಿ ಜೆಸಿ.ಮಮತಾ ಶಿವಣ್ಣ ಉಪಸ್ಥಿತರಿದ್ದರು.

ಅಭಿನಂದನಾ ಸಮಾರಂಭದಲ್ಲಿ ಜೆಸಿಐ ಶಿವಮೊಗ್ಗ ಶರಾವತಿಯ ಎಲ್ಲಾ ಜೆಸಿಗಳು, ಮಾರ್ಗದರ್ಶಕರು ಸೇರಿದಂತೆ ಪರಿವಾರದ ಮಕ್ಕಳು ಉಪಸ್ಥಿತರಿದ್ದರು