ಶಿವಮೊಗ್ಗ: ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗ ನೀಡುವಲ್ಲಿ ಅಧಿಕಾರಿಗಳು ಶೋಷಣೆ ಮಾಡುತ್ತಾರೆ ಎಂದು ವಕೀಲ ಕೆ.ಪಿ. ಶ್ರೀಪಾಲ್ ಆರೋಪಿಸಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದಕ್ಕೊಂದು ತಾಜಾ ಉದಾಹರಣೆ ಎಂದರೆ, ಶಿವಮೊಗ್ಗ ಮೆಡಿಕಲ್ ಕಾಲೇಜ್ ನಲ್ಲಿ 17 ಜನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು.

ನಿಯಮಾವಳಿಯಂತೆ ಒಂದು ಹುದ್ದೆಯನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾಗಿಡಲಾಗಿತ್ತು. ಆದರೆ, ಈ ಮೀಸಲಿಟ್ಟ ವಿವರನ್ನು ಅಲ್ಲಿನ ಸಿಮ್ಸ್ ನಿರ್ದೇಶಕ ಸಿದ್ದಪ್ಪ ಅವರು ಸ್ಥಳೀಯ ಪತ್ರಿಕೆಗೆ ಮಾತ್ರ ಪತ್ರಿಕಾ ಪ್ರಕಟಣೆ ಕೊಟ್ಟಿರುತ್ತಾರೆ. ಅದರ ಪ್ರಕಾರ ಯಾರು ಅರ್ಜಿ ಸಲ್ಲಿಸಲಿಲ್ಲ. ಇವರು ಅದನ್ನೇ ನೆಪವಾಗಿಟ್ಟುಕೊಂಡು ನಿಯಮಗಳಿಗೆ ವಿರುದ್ಧವಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹುದ್ದೆಯನ್ನು ಜನರಲ್ ಮೆರಿಟ್ ಗೆ ವರ್ಗಾಯಿಸಿ ಅಭ್ಯರ್ಥಿಯೊಬ್ಬನೊಂದಿಗೆ ಹಣಕ್ಕೆ ಮಾತನಾಡಿ ಅವ್ಯವಹಾರ ನಡೆಸಿದ್ದಾರೆ. ಆತನಿಗೆ ನೇರ ಸಂದರ್ಶನದಲ್ಲಿ ಅತ್ಯಂತ ಹೆಚ್ಚಿಗೆ ಅಂಕ ನೀಡಿ ಆಯ್ಕೆಮಾಡಿದ್ದಾರೆ. ಇದು ಸಂಪೂರ್ಣ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಯಾವುದೇ ಹುದ್ದೆಗಳ ಪ್ರಕಟಣೆಯನ್ನು ರಾಜ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ಪತ್ರಿಕೆಗಳಿಗೆ ಕಳಿಸಬೇಕು. ಸ್ಥಳೀಯವಾಗಿ ಅಭ್ಯರ್ಥಿಗಳು ಸಿಗದೇ ಇರಬಹುದು. ಆದರೆ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇದ್ದೇ ಇರುತ್ತಾರೆ. ನಿಯಮದ ಪ್ರಕಾರ ಒಂದು ಬಾರಿ ಸಿಗದಿದ್ದರೆ ಮತ್ತೆರಡು ಬಾರಿ ಪತ್ರಿಕಾ ಪ್ರಕಟಣೆ ನೀಡಬೇಕು. ಆದರೆ, ಹೀಗೆ ನೀಡದೇ ತಮಗೆ ಬೇಕಾದವರೊಬ್ಬರಿಗೆ ಹುದ್ದೆ ನೀಡಲು ಈ ರೀತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದು ದೂರಿದರು.ಯಾವುದೇ ಸರ್ಕಾರಿ ಹುದ್ದೆಗೆ ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶವಿರುತ್ತದೆ. ಅವರಿಗೆ ಈ ವಿಷಯ ಗೊತ್ತಾಗುವುದೇ ಇಲ್ಲ.

ಸಾಕಷ್ಟು ಲೈಂಗಿಕ ಅಲ್ಪಸಂಖ್ಯಾತರು ಜೀವನದಲ್ಲಿ ಸಾಕಷ್ಟು ನೊಂದಿರುತ್ತಾರೆ. ವಿದ್ಯಾಭ್ಯಾಸವೂ ಅವರಿಗೆ ಸಿಕ್ಕಿರುವುದಿಲ್ಲ. ಹೇಗೋ ಕಷ್ಟಪಟ್ಟು ಓದಿದ ಕೆಲವರಿಗಾದರೂ ಸರ್ಕಾರಿ ಹುದ್ದೆ ಸಿಗುವಂತೆ ಮಾಡಬೇಕಾದುದು ಸರ್ಕಾರ ಮತ್ತು ಅಧಿಕಾರಿಗಳ ಮಾನವೀಯತೆ ನೆಲೆಯಾಗಿದೆ. ಆದರೆ, ಇಲ್ಲಿ ಮಾನವೀಯತೆ ಮರೆಯಾಗಿದೆ ಎಂದರು.ನಿಯಮವನ್ನು ಗಾಳಿಗೆ ತೂರಿದ ಸಿಮ್ಸ್ ಕಾಲೇಜಿನ ನಿರ್ದೇಶಕ ಸಿದ್ದಪ್ಪ ಅವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರಿ ಉದ್ಯೋಗ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಕ್ಷಾ ಸಮುದಾಯ ಸಂಘದ ಅಧ್ಯಕ್ಷ ಮೊಹಮ್ಮದ್ ಸೈಫುಲ್ಲಾ, ಡಯಾನಾ, ಅರ್ಚನಾ, ಪ್ರತಾಪ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…