ಶಿವಮೊಗ್ಗ: ಸೈಕಲ್ ತುಳಿಯುವುದರಿಂದ ಮನಸ್ಸು ಸದೃಢವಾಗುವುದರ ಜತೆಯಲ್ಲಿ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಹಾಗೂ ಡೆಕತ್‌ಲಾನ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ, ಆರೋಗ್ಯ ಜಾಗೃತಿ, ಎಚ್‌ಐವಿ, ಏಡ್ಸ್ ಜಾಗೃತಿ, ಪರಿಸರ ಜಾಗೃತಿ, ಮಧುಮೇಹ ಸೇರಿದಂತೆ ಅನೇಕ ರೀತಿ ಜಾಗೃತಿ ಚಟುವಟಿಕೆಗಳಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿದೆ. ರಾಜ್ಯದಲ್ಲಿಯೇ ಮಾದರಿ ಸೈಕಲ್ ಕ್ಲಬ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಶಿವಮೊಗ್ಗ ಸೈಕಲ್ ಕ್ಲಬ್‌ನಲ್ಲಿ 39 ಜನರು ಗಿನ್ನೆಸ್ ದಾಖಲೆ ಪ್ರಶಸ್ತಿ ಪುರಸ್ಕೃತರಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಕಲ್ ಜಾಥಾವನ್ನು ಹಿರಿಯ ಸೈಕಲ್‌ಪಟು ಜಗನ್ನಾಥ ಆರಾಧ್ಯ ಚಾಲನೆ ನೀಡಿ ಮಾತನಾಡಿದರು. ಡೆಕತ್‌ಲಾನ್ ಸಂಸ್ಥೆ ಮುಖ್ಯಸ್ಥ ಅರುಣ್ ಮಾತನಾಡಿ, ಮುಂದಿನ ತಿಂಗಳು ಕ್ರೀಡೆಗೆ ಸಂಬAಧಿಸಿದ ಎಲ್ಲ ಸಾಮಾಗ್ರಿಗಳನ್ನು ಶಿವಮೊಗ್ಗದಲ್ಲಿ ದೊರೆಯುವಂತೆ ಹಾಗೂ ಪ್ರತಿ ತಿಂಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸೈಕಲ್ ಜಾಥಾವು ಶಿವಮೊಗ್ಗ ನಗರದ ನೆಹರು ಸ್ಟೇಡಿಯಂನಿAದ ಗೋಪಿ ವೃತ್ತ, ಎಎ ವೃತ್ತ, ಬಸ್‌ನಿಲ್ದಾಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಸೈಕಲ್ ಕ್ಲಬ್ ನಡೆದುಬಂದ ಹಾದಿಯನ್ನು ವಿವರಿಸಿದರು. ಸೈಕಲ್ ಸವಾರರಿಗೆ ಡೆಕತ್‌ಲಾನ್ ಕಂಪನಿ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಜಾಥಾದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್, ಸಂಜಯ್, ವಿಜಯ್‌ಕುಮಾರ್, ಪ್ರೀತಮ್, ಅರುಣ್, ಸೌಮ್ಯ, ಅಮೃತ್, ಸಚಿನ್, ಎಂ.ಪಿ.ನಾಗರಾಜ್, ಹರ್ಷ, ಮನೋಜ್, ಶ್ರೀನಿವಾಸ್, ಶ್ರೀಧರ್, ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.