ದಿನಾಂಕ 26-12-21ರಂದು, ಬೆಂಗಳೂರಿನ ಜಗನ್ನಾಥ ಭವನ, ರಾಜ್ಯ ಬಿಜೆಪಿ ಕಾರ್ಯಾಲಯ, ಮಲ್ಲೇಶ್ವರಂ ನಲ್ಲಿ ಸುಶಾಸನ ದಿವಸ ಆಚರಣಾ ಸಂದರ್ಭದಲ್ಲಿ,
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಮಾಜ ಸೇವೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮಹಿಳಾ ಜನಪ್ರತಿನಿಧಿಗಳಿಗೆ “ಅಟಲ್ ಪ್ರಶಸ್ತಿ” ವಿತರಣಾ ಕಾರ್ಯಕ್ರಮವನ್ನು ಬಿಜೆಪಿ ಮಹಿಳಾ ಮೋರ್ಛಾ ವತಿಯಿಂದ ನಡೆಸಲಾಯಿತು.
ಈ ಸಮಾರಂಭದಲ್ಲಿ ಶಿವಮೊಗ್ಗ ನಗರ ಮಹಿಳಾ ಮೋರ್ಛಾ ಆಧ್ಯಕ್ಷರು, ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಶೀಮತಿ ಸುರೇಖ ಮುರಳೀಧರ್ ಸೇರಿದಂತೆ, ರಾಜ್ಯದ 11 ಮಹಿಳಾ ಜನಪ್ರತಿನಿಧಿಗಳಿಗೆ ಅಟಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕರ್ನಾಟಕ ಮುನ್ಸಿಪಲ್ ಆಡಳಿತ ಸಚಿವರಾದ ಶ್ರೀ ಎಂಟಿಬಿ ನಾಗರಾಜ್ ರವರು ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಅಬಕಾರಿ ಸಚಿವರಾದ ಶ್ರೀ ಗೋಪಾಲಯ್ಯರವರು, ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದರವರು, ರಾಜ್ಯ ಉಪಾಧ್ಯಕ್ಷೆ ಸುನಿತಾ ಜಗದೀಶ್ ರವರು, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಿಲ್ಪಾ ಸುವರ್ಣರವರು, ಜಿಲ್ಲಾಧ್ಯಕ್ಷೆ ಶ್ರೀಮತಿ ವಿದ್ಯಾ ಲಕ್ಷ್ಮೀಪತಿರವರು ಉಪಸ್ಥಿತರಿದ್ದರು.