ದಾವಣಗೆರೆ ನಗರ ಪಾಲಿಕೆ ಮೇಯರ್-ಉಪ ಮೇಯರ್ ಸೇರಿ 50 ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 6 ಲಕ್ಷದಿಂದ 16 ಲಕ್ಷದವರೆಗೆ ಹಣ ಜಮಾ ಆಗಿ, ಮತ್ತೆ ಬ್ಯಾಂಕ್‌ಗೆ ವಾಪಸ್ಸಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ ಆಡಳಿತ-ವಿಪಕ್ಷ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 50 ಜನರ ಖಾತೆಗಳಿಗೆ 3 ಕೋಟಿಗೂ ಅಧಿಕ ಹಣ ಜಮಾ ಆಗಿದೆ. ಬ್ಯಾಂಕ್‌ನ ಸಿಬ್ಬಂದಿ ಹಣ ಜಮಾ ಮಾಡುವ ವೇಳೆ ಎರಡು ಸೊನ್ನೆ ಹೆಚ್ಚು ಸೇರಿಕೊಂಡಿದ್ದರಿಂದ ಈ ಅವಾಂತರವಾಗಿದೆ. ಇದರಿಂದಾಗಿ ಮೇಯರ್‌ಗೆ 16 ಸಾವಿರ, ಉಪ ಮೇಯರ್‌ಗೆ 10 ಸಾವಿರ, ಸದಸ್ಯರಿಗೆ ತಲಾ 6 ಸಾವಿರ ರು.ಗಳಂತೆ ನೀಡಬೇಕಾಗಿದ್ದ ಗೌರವಧನ ಮಾತ್ರ ಸಾವಿರದ ಬದಲು ಲಕ್ಷ ಲೆಕ್ಕದಲ್ಲಿ ಸಂದಾಯವಾಗಿದೆ.ಎಚ್ಚೆತ್ತ ಬ್ಯಾಂಕ್‌ನವರು ಅನೇಕರ ಖಾತೆಯಲ್ಲಿದ್ದ ಹಣ ಬ್ಲಾಕ್ ಮಾಡಿದ್ದಾರೆ.ಪಾಲಿಕೆಗೆ ಮಾಹಿತಿ ನೀಡಿ ಸದಸ್ಯರಿಗೆ ಕರೆ ಮಾಡಿ, ಹಣವನ್ನು ವಾಪಸ್ ಪಡೆದಿದ್ದಾರೆ.
ವರದಿ ಮಹೇಶ್ ಬೆಂಗಳೂರು.