02-01-2022 ಭಾನುವಾರ, ಶಿವಮೊಗ್ಗ ನಗರದ ಅಶೋಕನಗರ ಯೋಗಮಂದಿರ, ಎ.ಆರ್.ಬಿ. ಕಾಲೋನಿಯಲ್ಲಿ, ರೋಟರಿ ರಕ್ತನಿಧಿ, ಶಿವಮೊಗ್ಗ, ಶಿವಮೊಗ್ಗದ ಎಲ್ಲಾ ಸಂಘ ಸಂಸ್ಥೆಗಳು, ಎಲ್ಲಾ ನಿವಾಸಿಗಳು, ವಿದ್ಯಾರ್ಥಿಗಳ ಸಹಕಾರದೊಂದಿಗೆ ರಕ್ತದಾನ ಶಿಬಿರವು ಆಭಿರುಚಿ, ಭಾರತೀಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಳ್ಳಲಾಗಿತ್ತು.

ಆಭಿರುಚಿ, ಭಾರತೀಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಡಾ||ಎ. ಶಿವರಾಮ ಕೃಷ್ಣ ರವರು, ರಕ್ತದಾನ ಮಹಾದಾನ, ರಕ್ತ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಮನುಷ್ಯನಲ್ಲಿ ಮಾತ್ರ ಉತ್ಪತ್ತಿಯಾಗುವುದು, ನಮ್ಮ ಒಡಹುಟ್ಟ ಅಣ್ಣ, ತಮ್ಮ, ಅಕ್ಕ, ತಂಗಿಯರಿಗೆ ರಕ್ತದಾನ ಮಾಡಬಾರದು, ರಕ್ತವು ಸಂಗ್ರಹಿಸಿಡಲು ಒಂದು ಕಾಲಮಿತಿ ಇದೆ, ಬಹಳ ದಿನ ಇಡಲು ಸಾಧ್ಯವಿಲ್ಲ, ರಕ್ತ ಸರಿಯಿಲ್ಲದಿದ್ದರೆ, ಟೆಸ್ಟಿಂಗ್ ಮಾಡಿದ ಎಲ್ಲಾ ಖರ್ಚು ವೆಸ್ಟ್ ಎಂದು ಹೇಳಿದರು.

ನಿವೃತ್ತ ಡಿವೈಎಸ್ಪಿ ಸಿದ್ದಲಿಂಗಪ್ಪ ನವರು, ಮನುಷ್ಯ ಭಾವಗೀತೆ ಬಹಳ ಅರ್ಥಪೂರ್ಣ ವಾಗಿರುತ್ತದೆ, ಅದರ ಜೋತೆ ಅದರ ಅರ್ಥ ತಿಳಿದುಕೊಂಡು ಬದುಕಿದರೆ ಜೀವನ ಸಾರ್ಥಕ ಎಂದು ಹೇಳಿದರು. ರಕ್ತದಾನ ಮಾಡಿದ ದಾನಿಗಳಿಗೆ ರೋಟರಿಯ ಪ್ರಮಾಣ ಪತ್ರವ ವಿತರಿಸಲಾಯಿತು, ರಕ್ತದಾನಿಗಳಿಗೆ ಸುಮಧುರ ಗಾಯನ ರಸಮಂಜರಿ ಕಾರ್ಯಕ್ರಮವು ನಿವೃತ್ತ ಪೊಲೀಸ್ ಅಧಿಕಾರಿ ವಾಸುದೇವ ರವರ ತಂಡದಿಂದ ಕೇಳಿಬರುತ್ತಿತ್ತು. ನಿರೂಪಣೆಯನ್ನು ಶ್ರೀ ಬಿ.ಆರ್.ಬಾಪಟ್ ರವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಕೆಬಿ ಪ್ರಸನ್ನಕುಮಾರ್, ಯೋಗಮಂದಿರದ ಗೌರವಾಧ್ಯಕ್ಷರಾದ ಶ್ರೀ ಮುಜಿಬ್, ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಗೌರಿಶಂಕರ, ಅಭಿರುಚಿಯ ಹಿರಿಯ ಸದಸ್ಯರಾದ ಶ್ರೀ ಕೇಶವ ಪ್ರಭು, ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಅಭಿರುಚಿಯ ಪದಾಧಿಕಾರಿಗಳು, ರಕ್ತದಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…