“ಶಿವಮೊಗ್ಗ ನಗರದ ವಿವಿಧ ಕೈಗಾರಿಕಾ ಪ್ರಧೇಶಗಳಲ್ಲಿ ವಿದ್ಯುತ್ ಮೂಲಭೂತ
ಸೌಕರ್ಯದಲ್ಲಿ ಕೊರತೆ ಹಾಗೂ ಕುವೆಂಪು ರಂಗಮAದಿರವನ್ನು ಉನ್ನತೀಕರಣಗೊಳಿಸುವ
ಬಗ್ಗೆ ಇಂಧನ ಸಚಿವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿAದ ಮನವಿ”.
ಮಾಚೇನಹಳ್ಳಿ ಕೈಗಾರಿಕಾ ವಸಹಾತುವಿನಲ್ಲಿ ಇತ್ತೀಚೆಗೆ ಇಲ್ಲಿರುವ ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿರುತ್ತಾರೆ ಮತ್ತು ಹಲವು ಹೊಸ ಉದ್ಯಮಗಳು ಸಹ ಸ್ಥಾಪಿಸಲ್ಪಟ್ಟಿದ್ದು, ವಿದ್ಯುತ್ ಬೇಡಿಕೆಯು ಹೆಚ್ಚಾಗಿದ್ದು ಕೆ.ಪಿ.ಟಿ.ಸಿ.ಎಲ್.ನಿಂದ ೧ ೨೦ ಅಧಿಕ ವಿದ್ಯುತ್ ಟ್ರಾನ್ಸ್ಫರ‍್ಮರ್‌ನ್ನು ಹೊಸದಾಗಿ ಸ್ಥಾಪಿಸುವ ಬಗ್ಗೆ ಬೇಡಿಕೆ ಸಲ್ಲಿಸಲಾಯಿತು.
ಸಾಗರ ರಸ್ತೆ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ಹಾಲಿ ಇರುವ ಟ್ರಾನ್ಸ್ಫಾರ್ಮರ್‌ಗಳ ಮೇಲೆ ಅಧಿಕ ಹೊರೆಯಿಂದ ಈಗಿರುವ ಗ್ರಾಹಕರಿಗೆ ವಿದ್ಯುತ್ ಸರಬರಾಜುವಿನಲ್ಲಿ ತುಂಬಾ ವ್ಯತ್ಯಯವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಗಳನ್ನು ಸಂಪರ್ಕಿಸಿದಾಗ ಗ್ರಾಹಕರೆ ಅವಶ್ಯಕತೆಯಿದ್ದಲ್ಲಿ ಹೊಸ ಟ್ರಾನ್ಸ್ಫಾರ್ಮರನ್ನು ಸ್ಥಾಪಿಸಲು ಹೇಳುತ್ತಿದ್ದಾರೆ.
ಹೊಸ ಸಂಪರ್ಕ ಪಡೆಯಲಿಚ್ಚಿಸುವ ಗ್ರಾಹಕರು ಮಾತ್ರ ಎಕ್ಸ್ಪೀರಿಮೆಂಟ್ ಪದ್ದತಿಯಲ್ಲಿ ಹೊಸ ಟ್ರಾನ್ಸ್ಪರ‍್ಮರ್‌ನ್ನು ಹಾಕಬೇಕಿರುತ್ತದೆ. ಆದರೆ ಈಗಾಗಲೆ ಸಂಪರ್ಕ ಹೊಂದಿರುವ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಬಂದರೆ ಅದನ್ನು ಸಂಬAಧಪಟ್ಟ ಇಲಾಖೆಯೆ ಸರಿಪಡಿಸಬೇಕಿರುತ್ತದೆ. ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶಿಸಿ ಈಗಾಗಲೆ ಇರುವ ಗ್ರಾಹಕರಿಗೆ ಸರಬರಾಜಿನಲ್ಲಿ ಆಗುತ್ತಿರುವ ತೊಂದರೆಯನ್ನು ನೀಗಿಸಲು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್‌ನ್ನು ಇಲಾಖೆ ವತಿಯಿಂದಲೆ ಸ್ಥಾಪಿಸಲು ವಿನಂತಿಸಲಾಯಿತು.
ದೇವಕಾತಿಕೊಪ್ಪ ಕೈಗಾರಿಕಾ ವಸಹಾತುವಿನಲ್ಲಿ ಸುಮಾರು ೮ ವರ್ಷಗಳ ಹಿಂದೆಯೇ ನಿವೇಶನ ಹಂಚಿಕೆಯಾಗಿದ್ದ್ದು ಅಲ್ಲಿ ಕೈಗಾರಿಕಾ ನಿವೇಶನಗಳನ್ನು ಈಗಾಗಲೆ ಉದ್ಯಮಿಗಳಿಗೆ ಹಂಚಿಕೆ ಮಾಡಿರುತ್ತಾರೆ ಮತ್ತು ಚಿಕ್ಕ-ಚಿಕ್ಕ ಉದ್ಯಮಿಗಳು ಕಟ್ಟಡಗಳನ್ನು ಕಟ್ಟಿ ಯಂತ್ರಗಳನ್ನು ಅಳವಡಿಸಿಕೊಂಡಿರುತ್ತಾರೆ. ವಿದ್ಯುತ್ ಸರಬರಾಜಿಗಾಗಿ ಠೇವಣಿ ಕಟ್ಟಿ ಕಾಯುತ್ತಿದ್ಧಾರೆ. ಆದರೆ ಈ ಸಣ್ಣ ಉದ್ದಿಮೆದಾರರಿಗೆ ಸಾಕಾಗುವಷ್ಟು ವಿದ್ಯುತ್ ಸಂಪರ್ಕವನ್ನು ಕೊಟ್ಟಿರುವುದಿಲ್ಲ. ಕರ್ನಾಟಕ ಕೈಗಾರಿಕಾ ಅಭಿವೃದ್ದಿ ಮಂಡಳಿ ಇವರು ಕೈಗಾರಿಕೆಯನ್ನು ನಿಗದಿತ ಸಮಯದೊಳಗೆ ಚಾಲನೆ ಮಾಡದಿದ್ದಕ್ಕಾಗಿ ಅವರಿಗೆ ಬಡ್ಡಿ ಮತ್ತು ದಂಡ ಶುಲ್ಕವನ್ನು ವಿಧಿಸಿರುತ್ತಾರೆ. ಇದರಿಂದ ಕೈಗಾರಿಕೋದ್ಯಮಿಗಳು ಕೈಗಾರಿಕೆ ಸ್ಥಾಪಿಸುವ ಮೊದಲೆ ತುಂಬಾ ಆರ್ಥಿಕ ಹೊರೆಯನ್ನು ಅನುಭವಿಸಬೇಕಾಗಿದೆ. ಆದ್ದರಿಂದ ತಾವು ತುರ್ತಾಗಿ ಈ ಹೊಸ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕವನ್ನು ದೊರಕಿಸಿಕೊಡಬೇಕಾಗಿ ವಿನಂತಿಸುತ್ತೇವೆ.
ಕಲ್ಲೂರು–ಮAಡ್ಲಿ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ತುಂಬಾ ಅಡಚಣೆಗಳಾಗುತ್ತಿದ್ದು ವ್ಯವಸ್ಥೆಯನ್ನು ಕರ್ನಾಟಕ ಸಣ್ಣ-ಕೈಗಾರಿಕಾ ಅಭಿವೃದ್ದಿ ಮಂಡಳಿ ಯವರೆ ಅಭಿವೃದ್ದಿಪಡಿಸಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮೆಸ್ಕಾಂನವರಿಗೆ ಹಸ್ತಾಂತರಿಸಿಲ್ಲವೆAದು ಮೆಸ್ಕಾಂನವರು ಹೇಳುತ್ತಿದ್ದು ಇದರಿಂದ ಇಲ್ಲಿಯ ಗ್ರಾಹಕರಿಗಾಗುವ ವಿದ್ಯುತ್ ಸರಬರಾಜುವಿನಲ್ಲಾಗುವ ಅಡಚಣೆಗಳನ್ನು ಸರಿಪಡಿಸಲು ಮೆಸ್ಕಾಂನವರು ಸ್ಪಂದಿಸುತ್ತಿಲ್ಲ. ಕರ್ನಾಟಕ ಸಣ್ಣ-ಕೈಗಾರಿಕಾ ಅಭಿವೃದ್ದಿ ಮಂಡಳಿಯವರನ್ನು ಸಂಪರ್ಕಿಸಿದಾಗ ಅವರು ಈಗಾಗಲೆ ಮೆಸ್ಕಾಂ ರವರಿಗೆ ಹಸ್ತಾಂತರಿಸಿರುವುದಾಗಿ ತಿಳಿಸುತ್ತಿರುತ್ತಾರೆ. ಆದ್ದರಿಂದ ತಾವುಗಳು ಕರ್ನಾಟಕ ಸಣ್ಣ-ಕೈಗಾರಿಕಾ ಅಭಿವೃದ್ದಿ ಮಂಡಳಿಯ ಅಧಿಕಾರಿಗಳಿಗೆ ಇದಕ್ಕೆ ಬೇಕಾದ ಕ್ರಮಕೈಗೊಳ್ಳಲು ಸಚಿವರಲ್ಲಿ ವಿನಂತಿಸಲಾಯಿತು.
ಶಿವಮೊಗ್ಗ ನಗರದಲ್ಲಿ ಸಾಂಸ್ಕೃತಿಕ ಚುಟುವಟಿಕೆಗಳ ಕೇಂದ್ರವಾದ ಕುವೆಂಪು ರಂಗಮAದಿರವು ತುಂಬಾ ವರ್ಷಗಳಿಂದ ನವೀಕರಣಗೊಂಡಿರುವುದಿಲ್ಲ. ಕುವೆಂಪು ರಂಗಮAದಿರವನ್ನು ಇನ್ನಷ್ಟು ಸುವ್ಯಸ್ಥಿತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ ಹಾಗೂ ಕುವೆಂಪು ರಂಗಮAದಿರದ ವೇದಿಕೆ ಹಾಗೂ ಬಯಲು ರಂಗಮAದಿರದ ವೇದಿಕೆಯನ್ನು ಪ್ರತ್ಯೇಕಿಸುವುದು, ದ್ವನಿ ನಿಯಂತ್ರಣ, ಬೆಳಕು ವ್ಯವಸ್ಥೆ ಸುಧಾರಣೆ, ತಂತ್ರಜ್ಙಾನ ಸರಿಪಡಿಸುವಿಕೆ, ಗಂಗ ತಾಲೀಮು ಕೊಠಡಿ ನಿರ್ಮಾಣ, ಮತ್ತು ಕಟ್ಟಡವು ಬಣ್ಣ ಕಾಣದೆ ಹಲವು ವರ್ಷಗಳಾಗಿದ್ದು ಮೆಲೆನಾಡಿನ ಸಂಸ್ಕೃತಿಗೆ, ಸೌಂದರ್ಯಕ್ಕೆ ಹೊಂದಿಕೆಯಾಗುವAತೆ ಬಣ್ಣ ಬಳಿಸುವ ಕಾರ್ಯ ಹಾಗೂ ಮೂಲಭುತ ಸೌಕರ್ಯಗಳನ್ನು ತುರ್ತಾಗಿ ಮಾಡಿಸಿಕೊಡಲು ಮಾನ್ಯ ಸಚಿವರಿಗೆ ನಿವೇದಿಸಿಕೊಳ್ಳಲಾಯಿತು.
ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳೀದಾರ್, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಕೈಗಾರಿಕಾ ಸಮಿತಿ ಛರ‍್ಮನ್ ರಾದ ಎಂ. ರಾಜು, ಬಿ.ಆರ್ ಸಂತೋಷ್, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಎಲಿ, ಪರಮೇಶ್ವರ ಇ. ಉಮೇಶ್ ಶಾಸ್ರೀ, ವಿಶ್ವೇಶ್ವರಯ್ಯ, ನಾಗೇಶ್‌ರಾವ್, ಕಿರಣ ಹಾಗೂ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.