31/12/21 ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಡೇ ನಲ್ಮ್ ಅಭಿಯಾನದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಬೀದಿಬದಿ ವ್ಯಾಪಾರಿಗಳ” ಪಟ್ಟಣ ಮಾರಾಟ ಸಮಿತಿಯ ಸದಸ್ಯರುಗಳಿಗೆ” ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಮಹಾ ಪೌರರಾದ ಶ್ರೀ ಮತಿ ಸುನೀತಾ ಅಣ್ಣಪ್ಪನವರು ಮುಂದಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಸಭೆ ಕರೆಯುತ್ತೇವೆ ಎಂದು ಹೇಳಿದರು. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಧೀರರಾಜ್ ಹೊನ್ನವಲೆ ರವರು ಸರ್ಕಾರವು ಹಲವು ಸವಲತ್ತುಗಳು ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುತ್ತಿದೆ, ಅದರ ಮಾಹಿತಿ ಕುರಿತು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಪ್ರಕೋಷ್ಟಕ ಯೋಜನಾ ನಿರ್ದೇಶಕರಾದ ಶ್ರೀ ಕರೀಭೀಮಣ್ಣ ರವರು, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಲಯಗಳು ಎಲ್ಲೆಲ್ಲಿ ನಿರ್ಮಿಸಿರುವಿರಿ ಸರ್ಕಾರದ ಸೌಲಭ್ಯಗಳ ಮಾಹಿತಿಗಳು ಪಾಲಿಕೆ ಅಧಿಕಾರಿ ವರ್ಗದವರು ಬೀದಿ ಬದಿ ಯ ವ್ಯಾಪಾರಿಗಳಿಗೆ ಹೇಳಬೇಕು ಮತ್ತು ಅನುಷ್ಠಾನ ಗೊಳಿಸಲು ಪ್ರಯತ್ನಿಸಿದರೆ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದು ಹೇಳಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಯತೀಶ್ ರವರು, ಯಾರು ಸ್ವ ನಿಧಿ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲ ದೊರೆತ್ತಿಲ್ಲ ಅವರ ಪಟ್ಟಿ ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜನರಲ್ ಅಡ್ವಿಕೇಟ್ ಶ್ರೀ ಮತಿ ಪ್ರೇಮರವರು, 2014ನೇ ಕಾಯ್ದೆ 21ನೇ ಪರಚೇದದ 2019ನೇ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಕಾಯ್ದೆ ಕುರಿತು ಟಿವಿಸಿ ಸದಸ್ಯರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನದ ವ್ಯವಸ್ಥಾಪಕರಾದ ಶ್ರೀ ದೇವೆಂದ್ರನಾಯ್ಕ ರವರು ಡೇ ನಲ್ಮ್ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಫುಡ್ ಸೇಫ್ಟಿ ಅಧಿಕಾರಿಗಳಾದ ಶ್ರೀ ಸೋಮೇಶ್ ರವರು ನಾವುಗಳು ತಿನ್ನುವ ಆಹಾರಗಳಾದ ಸೋಪು, ತರಕಾರಿಗಳಲ್ಲಿ ಕೀಟನಾಶಕ, ಫುಡ್ ಕೇಕ್ ನಲ್ಲಿ ರಾಸಾಯನಿಕ ಬಣ್ಣಗಳ ಮಿಶ್ರಣದ ಬಗ್ಗೆ ಮಾಹಿತಿ ನೀಡಿದರು.

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾಧ್ಯಕ್ಷರು ಹಾಗೂ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ನಿಜವಾದ ಬೀದಿ ಬದಿಯ ವ್ಯಾಪಾರಿಗಳಿಗೆ ಪಿಎಂ ಸ್ವ ನಿಧಿಯ ಸಾಲ ಸೌಲಭ್ಯ ದೊರೆಯುತ್ತಿಲ್ಲ, ಡಿಸಿಸಿ ಬ್ಯಾಂಕ್ ನಲ್ಲಿ ಬಡವರ ಬಂಧು ಸ್ಕೀಂ ನಲ್ಲಿ ಸಾಲ ಪಡೆದ ಬೀದಿ ಬದಿ ವ್ಯಾಪಾರಿಗಳಿಗೆ ಇದುವರೆಗೂ ಸ್ವ ನಿಧಿಯ ಸಾಲ ಸಿಕ್ಕಿಲ್ಲ, ಸಿಕ್ಕ ಸಿಕ್ಕವರಿಗೆ ಬೀದಿ ಬದಿಯ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆಯಾಗಿದೆ. ಈ ಡಿಸೆಂಬರ್ 31/12/2021ಕ್ಕೆ ಎಲ್ಲರಿಗೂ ನೀಡಿದ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ರದ್ದಾಗಬೇಕು.

ಮೊದಲು ಸಮೀಕ್ಷೆ ಯಾಗಬೇಕು ಬಹಳಷ್ಟು ಜನರು ಇಂದೆ ದುಡಿದು ತಿನ್ನುವ, ವಿದ್ಯಾಬ್ಯಾಸ ತಿಳಿಯದ ಅನಕ್ಷರಸ್ಥರು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವರು ಅವರ ಸ್ಥಳಗಳಿಗೆ ಗುರುತಿನ ಚೀಟಿ ವಿತರಣೆ ಮಾಡುವ ಅಧಿಕಾರಿ ವರ್ಗದವರು ಹೋಗಿ ಬಯೋಮೆಟ್ರಿಕ್ ನೊಂದಿಗೆ ಜಿಪಿಎಸ್ ಅಳವಡಿಸಿ ಸಮೀಕ್ಷೆ ಮಾಡಿ, ಒಂದು ಕುಟುಂಬಕ್ಕೆ ಒಂದು ಗುರುತಿನ ಚೀಟಿ ನೀಡಬೇಕು, ವೆಂಡಿಂಗ್ ಝೂನ ನಿರ್ಮಾಣ ಮಾಡಿದ ನಂತರ ಅಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ಅ ಸ್ಥಳವನ್ನು ನಾನ್ ವೆಂಡಿಂಗ್ ಝೂನ್ ಎಂದು ಘೋಷಣೆ ಮಾಡಬೇಕು ಅಲ್ಲಿಯವರೆಗೂ ಯಾರಿಗೂ ಒಕ್ಕಲೇಬಿಸಬಾರದು ಎಂದು ಹೇಳಿದರು.

ಈ ಕಾರ್ಯಾಗಾರದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಶ್ರೀ ಪ್ರಮೋದ್ ರವರು, ಎಇಇ, ಪಟ್ಟಣ ಮಾರಾಟ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶಾಂತಯ್ಯ ರವರು, ಟ್ರಾಫಿಕ್ ಪೊಲೀಸ್ ಇಲಾಖೆಯ ಇನ್ಸಪೆಕ್ಟರಾದ ಶ್ರೀ ಸಿದ್ದನಗೌಡ ರವರು, ಸೂಡಾದ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪಾಲಿಕೆ ಟಿವಿಸಿ ಸದಸ್ಯರಾದ ಶ್ರೀ ನಾರಾಯಣ ಎಂಎಸ್, ಶ್ರೀ ಶೇಷಯ್ಯ, ಶ್ರೀ ವಿನಯ್ ಕುಮಾರ್, ಶ್ರೀ ಇರ್ಫಾನ್, ಶ್ರೀ ಮತಿ ಚಂದ್ರಕಲಾ, ಶ್ರೀ ಮತಿ ಚಂದ್ರಮ್ಮ, ಶ್ರೀ ಮತಿ ಕವಿತ, ಪಾಲಿಕೆ ಸಮುದಾಯ ಅಧಿಕಾರಿಗಳಾದ ಶ್ರೀಮತಿ ಅನುಪಮಾ, ಶ್ರೀ ಲೊಕೇಶಪ್ಪ, ಶ್ರೀ ಮತಿ ರೇಣುಕಾ, ನಾಗರಿಕ ಹಿತರಕ್ಷಣಾ ವೇದಿಕೆಯ ಶ್ರೀ ಅಶೋಕ್ ಕುಮಾರ್ ಗಾಂಧಿ ಎಸ್. ಬಿ. ಛೇಂಬರ್ ಆಫ್ ಕಾಮರ್ಸ್ ನ ಶ್ರೀ ಶಿವಕುಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಶಂಕ್ರಪ್ಪ ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…