ಭದ್ರಾವತಿ ನ್ಯೂಸ್…
ಶಿವಮೊಗ್ಗ: ಕಾಂಗ್ರೆಸ್ ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರನ್ನಾಗಿ ಎಂ.ರಮೇಶ್ ಶಂಕರಘಟ್ಟ ಇವರನ್ನು ನೇಮಿಸಲಾಗಿದೆ.ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಘಟಕವು ಏರ್ಪಡಿಸಿದ್ದ ಜಿಲ್ಲಾ ಪದಾಧಿಕಾರಿಗಳ ಹಾಗೂ ವಿವಿದ ತಾಲ್ಲೂಕುಗಳ ಘಟಕ ಅಧ್ಯಕ್ಷರುಗಳಿಗೆ ನೇಮಿಸಿ ಹೊರಡಿಸಿದ ಆದೇಶ ಪತ್ರವನ್ನು ವಿತರಿಸಿದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕ ಜಿಲ್ಲಾಧ್ಯಕ್ಷರಾದ ರಮೇಶ್ ಇಕ್ಕೇರಿಯವರು ನೇಮಕಾತಿ ಪತ್ರವನ್ನು ನೀಡಿದರು.
ರಮೇಶ್ ರವರು ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೇ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿಯಾಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಇವರು ಭದ್ರಾವತಿ ತಾಲ್ಲೂಕ್ ಶಂಕರಘಟ್ಟದಲ್ಲಿ ದೀನಬಂಧು ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗು ಜರ್ನಲಿಸಂ ಪಿಜಿ ಡಿಪ್ಲೋಮಾ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ.
ಬಾಕ್ಸ್:”ಭದ್ರಾವತಿಯ ಮಾನ್ಯ ಶಾಸಕರಾದ ಬಿ.ಕೆ.ಸಂಗಮೇಶ್ ಇವರ ಸೂಚನೆಯ ಮೇರೆಗೆ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿರುತ್ತೇನೆ. ಈಗಾಗಲೇ ಇವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಶಾಸಕರ ಮಾರ್ಗದರ್ಶನಲ್ಲಿ ಪಕ್ಷದಿಂದ ವಿಮುಖರಾಗಿರುವ ಹಿಂದುಳಿದ ವರ್ಗಗಳ ಜನರನ್ನು ನಮ್ಮ ಪಕ್ಷದ ಮಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.”
– ಎಂ.ರಮೇಶ್ ಶಂಕರಘಟ್ಟ, ಅಧ್ಯಕ್ಷರು, ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕ, ಭದ್ರಾವತಿ.